ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಆಪ್ತ ಸ್ನೇಹಿತೆ ವಿಕೆ ಶಶಿಕಲಾ ತಮಿಳುನಾಡಿನ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಯಾ ಸಾವಿನ ಬಳಿಕ ಅಂದರೆ 2016, ಡಿಸೆಂಬರ್ 29ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯಾಗತ್ತಾರೆ. ಇದಾದ 2 ತಿಂಗಳ ಬಳಿಕ ಅಂದರೆ 2017 ಫೆಬ್ರವರಿ 5ರಂದು ಶಶಿಕಲಾ ತಮಿಳುನಾಡು ಸಿಎಂ ಆಗಿ ಆಯ್ಕೆಯಾಗುತ್ತಾರೆ. ಆ ಮೂಲಕ ಕಳೆದ 30 ವರ್ಷಗಳಿಂದ ಜಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿಶಕಲಾ ಅದರ ಆಧಾರದ ಮೇಲೆಯೇ ಸಿಎಂ ಗಾದಿಗೇರಲು ಸಿದ್ಧವಾಗಿದ್ದಾರೆ.
ಜಯ ಬಿಟ್ಟು ಹೋಗಿರುವ ಸಿಎಂ ಸ್ಥಾನಕ್ಕೇರಲು ಸಿದ್ಧವಾಗಿರುವ ಚಿನ್ನಮ್ಮ ಶಶಿಕಲಾ, ತಮಿಳುನಾಡಿನ ಮೂರನೇ ಮಹಿಳಾ ಸಿಎಂ ಆಗಿ ನೇಮಕವಾಗಿದ್ದಾರೆ. ಈ ಹಿಂದೆ 1988ರಲ್ಲಿ ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಪತ್ನಿ ಜಾನಕಿ ರಾಮಚಂದ್ರನ್ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಬಳಿಕ ನಡೆದ ರಾಜಕೀಯ ಪ್ರಹಸನದಿಂದಾಗಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ. 1995ರಲ್ಲಿ ಜೆ ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಜಯ ಬಳಿಕ ಮೂರನೇ ಮಹಿಳೆಯಾಗಿ ಶಶಿಕಲಾ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಿದ್ಧತೆ ನಡೆಸಿದ್ದಾರೆ.