ಶ್ರೀನಗರ: ಭಾರತದ ಮೂವರು ಯೋಧರು ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದು ಜೊತೆಗೆ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.
ಶಸ್ತ್ರಾಸ್ತ್ರಧಾರಿಗಳಾದ ಉಗ್ರರು ನಸುಕಿನ ಜಾವ 2.30ಕ್ಕೆ ಉಗ್ರ ನಿಗ್ರಹ ಕಾರ್ಯಾಚರಣೆ ಮಾಡಿ ಬರುತ್ತಿದ್ದ ಸೇನಾಪಡೆಯ ಮೇಲೆ ಶೋಪಿಯಾನ್ ಜಿಲ್ಲೆಯ ಮಾಟ್ರಿಗಂ ಎಂಬಲ್ಲಿ ದಾಳಿ ನಡೆಸಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲಿ ಕಳೆದ ಮೂರು ವಾರಗಳಲ್ಲಿ ನಾಲ್ಕು ಬಾರಿ ಉಗ್ರರ ದಾಳಿ ನಡೆದಿದ್ದು, ಈ ಬಾರಿಯ ದಾಳಿಯಲ್ಲಿ ಪಕ್ಕದ ಮನೆಯಲ್ಲಿದ್ದ ಜನಾ ಬೇಗನ್ ಎಂಬ ವೃದ್ಧೆಗೆ ಗುಂಡು ತಾಗಿ ಮೃತಪಟ್ಟಿದ್ದಾರೆ.
ಸೇನಾಪಡೆಯು ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದ್ದು ಉಗ್ರರು ಕಾಲ್ಕಿತ್ತಿದ್ದಾರೆ.