ರಾಜ್ ಕೋಟ್: ರಾಜಕೋಟ್ನ ಹೊರಭಾಗದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಶಾರ್ಪ್ ಶೂಟರ್ ರಾಮದಾಸ್ ರಹಾನೆ ಸೇರಿ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಜಾಮ್ಗರ ಮೂಲದ ಉದ್ಯಮಿ ಅಶ್ಪಕ್ ಖತ್ರಿ ಅವರನ್ನು ಹತ್ಯೆ ಮಾಡುವಂತೆ ದಾವೂದ್ ಸಹೋದರ ಅನೀಸ್ ಇಬ್ರಾಹಿಂ ರಾಮ್ ದಾಸ್ ಹಾಗೂ ಇತರರಿಗೆ ಸೂಚಿಸಿದ್ದು, ಜಾಮ್ಗರದ ಉದ್ಯಮಿಯನ್ನು ಹತ್ಯೆ ಮಾಡಲು ಹೊರಟಿದ್ದ ವೇಳೆ ಇವರನ್ನು ಬಂಧಿಸಲಾಗಿದೆ.
ನಾಲ್ವರು ಆರೋಪಿಗಳು ಖತ್ರಿಯನ್ನು ಹತ್ಯೆ ಮಾಡಲು ಖಾಸಗಿ ಬಸ್ನಲ್ಲಿ ರಾಜ್ಕೋಟ್ಗೆ ಬಂದಿದ್ದರು. ಪಾಕಿಸ್ತಾನದಿಂದಲೇ 10 ಲಕ್ಷ ರೂಪಾಯಿಗೆ ಸುಪಾರಿ ನೀಡಲಾಗಿದ್ದು, ಈ ಹಿನ್ನಲೆ ಖಚಿತ ಮಾಹಿತಿಯೊಂದಿಗೆ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.