ಹೊಸದಿಲ್ಲಿ: ಲೋಕ ಸಭೆಗೆ ಕೇಂದ್ರಸರ್ಕಾರ ಮಾಹಿತಿ ನೀಡಿದ್ದು, ದೇಶದಲ್ಲಿ ಅಶ್ಲೀಲ ದೃಶ್ಯ ಹಾಗೂ ಅವುಗಳ ಕುರಿತು ಮಾಹಿತಿ ವಿತರಿಸುವ ಬರೋಬ್ಬರಿ 3000 ವೆಬ್ ಸೈಟ್ ಗಳಿಗೆ ಬ್ರೇಕ್ ಹಾಕಿದೆ.
ದೇಶದಲ್ಲಿ ಬಹುತೇಕ ಮಕ್ಕಳ ಅಶ್ಲೀಲ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ವಿದೇಶಗಳಿಂದ ರವಾನೆಯಾಗುತ್ತಿದ್ದು, ಅವುಗಳ ಮೇಲೆ ನಿಗಾ ಇಡಲಾಗಿದೆ ಎಂದು ಅದು ಹೇಳಿದೆ.
ಮಾತ್ರವಲ್ಲ ಮಹಿಳೆ ಹಾಗೂ ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ ಎಂದು ತಿಳಿದು ಬಂದಿದೆ.
ಅಶ್ಲೀಲ ವೆಬ್‌ಸೈಟ್‌ಗಳ ಮೇಲೆ ಇಂಟರ್‌ಪೋಲ್ ತೀವ್ರ ನಿಗಾ ಇರಿಸಿದ್ದು, ನಿರಂತರವಾಗಿ ಇಂತಹ ವೆಬ್‌ಸೈಟ್‌ಗಳ ಲಿಸ್ಟ್ ಮಾಡುವುದರ ಜತೆಗೆ ಅವುಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ.