ಉತ್ತರಪ್ರದೇಶ: ಫೋನ್‌ನಲ್ಲಿ ತ್ರಿವಳಿ ತಲಾಕ್ ಅನ್ನು 40 ವರ್ಷದ ಮಹಿಳೆಯೊಬ್ಬರು ವಿರೋಧಿಸಿದ್ದರಿಂದ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಉತ್ತರಪ್ರದೇಶ ಪಿಲಿಬಿತ್ ನಲ್ಲಿ ನಡೆದಿದೆ.
18 ವರ್ಷಗಳ ಹಿಂದೆ ಮಾತ್ಲುಬ್ ಎಂಬುವನನ್ನು ಸಂತ್ರಸ್ತ ಮಹಿಳೆ ರೆಹಾನಾ ಮುದುವೆಯಾಗಿದ್ದು, ನಂತರ ಪತಿ ಜೊತೆ ಅಮೆರಿಕಕ್ಕೆ ತೆರಳಿದ್ದರು. ಆದರೆ 2011ರಲ್ಲಿ ಅವರಿಬ್ಬರ ಸಂಬಂಧ ಹಳಸಿದ್ದರಿಂದ ಇಬ್ಬರು ಭಾರತಕ್ಕೆ ಮರಳಿದ್ದರು.
ಮಾತ್ಲುಬ್ ಭಾರತದಲ್ಲಿ ಕೆಲ ದಿನ ಇದ್ದು, ಮತ್ತೆ ಅಮೆರಿಕಕ್ಕೆ ತೆರಳಿದ್ದು ಕೆಲ ದಿನಗಳ ಬಳಿಕ ರೆಹಾನಾರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವುದಾಗಿ ಹೇಳಿ ಹೋಗಿದ್ದ. ಅಮೆರಿಕಕ್ಕೆ ತೆರಳಿದ ಮಾತ್ಲುಬ್ ರೆಹಾನಾಗೆ ಕೆಲ ವರ್ಷಗಳ ನಂತರ ರೆಹಾನಾಗೆ ದೂರವಾಣಿ ಕರೆ ಮಾಡಿ ತಲಾಕ್ ನೀಡಲು ರೆಹಾನಾ ಇದನ್ನು ವಿರೋಧಿಸಿದ್ದರು.
ಮನೆಯಲ್ಲಿ ರೆಹಾನಾ ಒಬ್ಬರೇ ಇದ್ದಾಗ ಪತಿಯ ಸಂಬಂಧಿಕನೊಬ್ಬ ಬಂದು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದು, ಆ್ಯಸಿಡ್ ದಾಳಿಯಿಂದ ಆಕೆಗೆ ಸುಟ್ಟ ಗಾಯಗಳಾಗಿದ್ದು, ರೆಹಾನಾ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ಐವರು ವಿರುದ್ಧ ಪೋಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.