ಹೊಸದಿಲ್ಲಿ: ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ನಿರೀಕ್ಷೆಯಂತೆಯೇ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ದೆಹಲಿಯು 3 ಮಹಾನಗರ ಪಾಲಿಕೆಗಳಲ್ಲಿ ಒಟ್ಟು 272 ವಾರ್ಡ್ ಗಳನ್ನು ಹೊಂದಿದ್ದು, ಏಪ್ರಿಲ್ 23 ರಂದು ನಡೆದ ಚುನಾವಣೆಯಲ್ಲಿ ಶೇ.54ರಷ್ಟು ಮತದಾನವಾಗಿತ್ತು. ಪ್ರಸ್ತುತ ಇರುವ ಅಂಕಿ ಅಂಶಗಳ ಪ್ರಕಾರ ಬಿಜೆಪಿ ಭರ್ಜರಿ ಮೇಲುಗೈ ಸಾಧಿಸಿದ್ದು, ಸತತ ಮೂರನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿಯುವತ್ತ ಮುನ್ನುಗ್ಗಿದೆ. 2ನೇ ಸ್ಥಾನಕ್ಕಾಗಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. 270 ಸ್ಥಾನಗಳ ಪೈಕಿ ಬಿಜೆಪಿ 179, ಆಮ್ ಆದ್ಮಿ ಪಕ್ಷ 44, ಕಾಂಗ್ರೆಸ್ 34 ಮತ್ತು ಇತರ ಪಕ್ಷಗಳು 13 ಮುನ್ನಡೆ ಸಾಧಿಸಿದೆ.
ಪ್ರಧಾನಿ ಮೋದಿಯವರ ಅಲೆಯ ನಡುವೆಯೂ ಪಾಲಿಕೆ ಚುನಾವಣೆಯಲ್ಲಿ ಬಹುಮತ ಗಳಿಸುವ ವಿಶ್ವಾದಲ್ಲಿದ್ದ ಕೇಜ್ರಿವಾಲ್ ಅವರ ಲೆಕ್ಕಾಚಾರ ತಲೆಕೆಳಗಾಗಿದ್ದು, ತೀವ್ರ ಮುಖಭಂಗವಾಗಿದೆ.