ಚೋಪ್ರೋ-ಪತೇಪುರ: ಕಿಶನಗಂಜ್’ಗೆ ಹೊಂದಿಕೊಂಡಿರುವ ಉತ್ತರ ಬಂಗಾಳದ ಚೋಪ್ರೋ-ಪತೇಪುರ ಗಡಿ ಬಳಿ ಅಕ್ರಮ ಜಾನುವಾರು ಸಾಗಾಟಗಾರರು ಚಹಾ ತೋಟವೊಂದರ ಮೂಲಕ ತೋಡಿರುವ 80 ಮೀ ಉದ್ದದ ಸುರಂಗ ಮಾರ್ಗವೊಂದನ್ನು ಬುಧವಾರ ಬಿಎಸ್ಎಫ್ (ಗಡಿ ಭಧ್ರತಾ ಪಡೆ) ಪತ್ತೆ ಮಾಡಿದೆ.
ಬಿಎಸ್ಎಫ್’ನ ಉಪ ಮಹಾ ನಿರ್ದೇಶಕ ದೇವಿ ಶರಣ್ ಸಿಂಗ್ ಅವರು ಹೇಳುವ ಪ್ರಕಾರ ಜಾನುವಾರುಗಳ ಕಳ್ಳಸಾಗಾಣಿಕೆಗೆ ಬಾಂಗ್ಲಾದೇಶಕ್ಕೆ ಗಡಿಯಲ್ಲಿ ಬೇಲಿ ನಿರ್ಮಾಣದಿಂದ ಸಮಸ್ಯೆಗಳು ಎದುರಾಗಿದ್ದು, ಬೇಲಿಯ ಕೆಳಗಿನಿಂದ ಕಳ್ಳಸಾಗಾಟಗಾರರು ಸುರಂಗ ಮಾರ್ತವನ್ನು ತೋಡುತ್ತಿದ್ದರು ಎಂದು ತಿಳಿಸಿದ್ದಾರೆ.
ಸುರಂಗ ಪತ್ತೆಯಾಗಿರುವ ಹಿನ್ನಲೆಯಲ್ಲಿ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಚಹಾತೋಟದ ಮೂಲಕ ಸುರಂಗವನ್ನು ಸುದೀರ್ಘ ಕಾಲದಿಂದ ರಾತ್ರಿ ಸಮಯದಲ್ಲಿ ಜಾನುವಾರಿಗಳ ಕಳ್ಳ ಸಾಗಾಣಿಕೆದಾರರು ತೋಡುತ್ತಿದ್ದರು ಎಂದು ತಿಳಿಸಿದ್ದಾರೆ.