ಹರಿಯಾಣ: ಜಿಲ್ಲೆಯಲ್ಲಿ ತಡ ರಾತ್ರಿ ದಲಿತ ಯುವತಿಯ ಮನೆಗೆ ನುಗ್ಗಿರುವ ಐವರು ಕಾಮುಕರು ಆಕೆಯನ್ನು ಅಪರಿಸಿ ಅತ್ಯಾಚಾರಗೈದು ಅದರ ವಿಡಿಯೋ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ನಡೆದಿರುವುದು ಒಂದು ತಿಂಗಳ ಹಿಂದೆ. ಮೇ 26ರಂದು ಮನೆಗೆ ನುಗ್ಗಿರುವ ಗ್ರಾಮದ ಐವರು ಕಾಮುಕರು ಯುವತಿಯನ್ನು ಅಪಹರಣ ಮಾಡಿ, ರಾತ್ರಿಯಿಡಿ ಆಕೆಯ ಮೇಲೆ ಅತ್ಯಾಚಾರಗೈದು ಅದರ ವಿಡಿಯೋ ಮಾಡಿದ್ದಾರೆ. ತದನಂತರ ಆಕೆಯನ್ನು ಮನೆಯ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ. ಇದರ ಜತೆಗೆ ಮನೆಯಲ್ಲಿದ್ದ 2 ಲಕ್ಷ ನಗದು ಹಣ ಸಹ ಲೂಟಿ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಯುವತಿ ದೂರು ನೀಡಿದ್ದರೂ ಇಲ್ಲಿಯವರೆಗೆ ಆಕೆಗೆ ನ್ಯಾಯ ಸಿಕ್ಕಿಲ್ಲ. ಸಂತ್ರಸ್ತ ಯುವತಿ ಮೇ 28ರಂದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಆದರೆ ಇಲ್ಲಿಯವರಗೆ ಆರೋಪಿಗಳ ಬಂಧನ ಮಾತ್ರವಾಗಿಲ್ಲ ಎಂದು ಆಕೆ ಹೇಳಿದ್ದಾಳೆ. ಆಕೆಯ ಮೇಲೆ ಅತ್ಯಾಚಾರವೆಸಗಿರುವವರ ಹೆಸರು ಸಹ ಆಕೆ ಪೊಲೀಸರ ಮುಂದೆ ಹೇಳಿದ್ದಾಳೆ. ಇಷ್ಟಾದರೂ ಕ್ರಮ ಕೈಗೊಂಡಿಲ್ಲ. ಪೊಲೀಸರು ಆರೋಪಿಗಳ ಪರವಾಗಿದ್ದಾರೆಂದು ಆಕೆ ದೂರಿದ್ದಾಳೆ.