ಹೊಸದಿಲ್ಲಿ: ನಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಏರ್ ಇಂಡಿಯಾವನ್ನು ಪಾರು ಮಾಡಲು ಖಾಸಗೀ ಕರಣಗೊಳಿಸಲು ಕೇಂದ್ರ ಸರಕಾರ ಇದೀಗ ಮೊದಲ ಹೆಜ್ಜೆ ಇಟ್ಟಿದೆ.
ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಹಣಕಾಸು ಸಚಿವ ಜೇಟ್ಲಿ ಸಂಪುಟ ಸಮಿತಿ ಸಭೆಯಲ್ಲಿ ಮಾತನಾಡಿದ ಇವರು “ಬಂಡವಾಳ ಹಿಂತೆಗೆತಕ್ಕೆ ತಾತ್ವಿಕ ಅನು ಮೋದನೆ ನೀಡಲಾಗಿದೆ’ ಎಂದು ಹೇಳಿದರು.
ಹಣಕಾಸು ಸಚಿವರ ನೇತೃತ್ವದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾ ಲಯ ಸಮಿತಿಯೊಂದನ್ನು ಸ್ಥಾಪಿಸಲಿದ್ದು, ಈ ಬಗ್ಗೆ ಹೆಚ್ಚಿನ ನಿರ್ಧಾರ ತೆಗೆದು ಕೊಳ್ಳಲಿದೆ. ಈ ಸಮಿತಿ ಸ್ಥಾಪನೆ ಪ್ರಸ್ತಾಪವನ್ನೂ ಅಂಗೀಕರಿ ಸಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆದರೆ ಈ ಬಂಡವಾಳ ಹಿಂತೆಗೆತದ ಅವಧಿ, ಬಂಡವಾಳ ಹಿಂತೆಗೆತದ ವಿಧಾನ, ಸಮಿತಿ ಅಂತಿಮ ವರದಿ ನೀಡುವ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ಸಮಿತಿ ಸದಸ್ಯರನ್ನು ಪ್ರಧಾನಿ ಮೋದಿ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶೀಯ ವಿಮಾನಯಾನದ ಶೇ.14 ರಷ್ಟು ಮಾರುಕಟ್ಟೆಯನ್ನು ಏರ್ ಇಂಡಿಯಾ ಹೊಂದಿದ್ದು, ಸಿಂಹಪಾಲನ್ನು ಇಂಡಿಗೋ ಮತ್ತು ಜೆಟ್ ಏರ್‌ವೇಸ್ ಹೊಂದಿದೆ.
ಹಿಂದಿನಿಂದಲೂ ಏರ್ ಇಂಡಿಯಾ ಬಂಡವಾಳ ಹಿಂತೆಗೆತದ, ಖಾಸಗೀಕರಣದ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕಳೆದ 25 ವರ್ಷಗಳಿಂದ ಇದಕ್ಕೆ ಕಾರ್ಮಿಕ ಸಂಘಟನೆಗಳು, ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಬಂಡವಾಳ ಹಿಂತೆಗೆಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು.
ಸದ್ಯ ಏರ್ ಇಂಡಿಯಾ 52 ಸಾವಿರ ಕೋಟಿ ರೂ. ನಷ್ಟದಲ್ಲಿದ್ದು, ಇದಕ್ಕಾಗಿ ಕೇಂದ್ರ ಕೂಡಲೇ ಬಂಡವಾಳ ಹಿಂತೆಗೆಯಬೇಕು. ಈ ಹಣವನ್ನು ಇತರ ವಲಯಗಳಿಗೆ ವಿನಿ ಯೋಗಿಸಲು ನೀತಿ ಆಯೋಗ ಹೇಳಿತ್ತು.