ಹೊಸದಿಲ್ಲಿ: ಕೆಲ ದಿನಗಳ ಹಿಂದೆ ಹರಿದಾಡಿದ ಸುದ್ದಿಯಂತೆ, 200 ರು. ಮುಖಬೆಲೆಯ ನೋಟುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ಈ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ.
ಅದರ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್, ನೋಟು ಮುದ್ರಣಕ್ಕೆ ಆದೇಶ ನೀಡಿದ್ದು, ಶೀಘ್ರದಲ್ಲೇ ನೋಟುಗಳ ಮುದ್ರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಮೈಸೂರು ಸೇರಿದಂತೆ ಮಹಾರಾಷ್ಟ್ರದ ನಾಸಿಕ್, ಮಧ್ಯ ಪ್ರದೇಶದ ದೇವಾಸ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯಗಳನ್ನು ಹೊಂದಿದ್ದು, ಇವುಗಳಲ್ಲಿ ಯಾವುದಾದರೊಂದಕ್ಕೆ 200 ರು. ಮುದ್ರಿಸುವ ಅವಕಾಶ ದೊರೆಯಲಿದೆ.