News Kannada
Sunday, September 25 2022

ದೇಶ-ವಿದೇಶ

ಗೋಧ್ರಾ ರೈಲು ಹತ್ಯಾಕಾಂಡ: 11 ಅಪರಾಧಿಗಳ ಮರಣದಂಡನೆ ಜೀವಾವಧಿಗೆ ಪರಿವರ್ತನೆ - 1 min read

Photo Credit :

ಗೋಧ್ರಾ ರೈಲು ಹತ್ಯಾಕಾಂಡ: 11 ಅಪರಾಧಿಗಳ ಮರಣದಂಡನೆ ಜೀವಾವಧಿಗೆ ಪರಿವರ್ತನೆ

ಅಹ್ಮದಾಬಾದ್: ಗೋಧ್ರಾದಲ್ಲಿ 2002ರಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಕರಸೇವಕರ ಹತ್ಯಾಕಾಂಡ ನಡೆಸಿದ್ದ ಅಪರಾಧಿಗಳಲ್ಲಿ 11 ಮಂದಿಗೆ ಕೆಳ ನ್ಯಾಯಾಲಯವು ನೀಡಿದ್ದ ಮರಣದಂಡನೆಯನ್ನು ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.

ಇದೇ ಪ್ರಕರಣದಲ್ಲಿ 20 ಮಂದಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. 2011ರಲ್ಲಿ ವಿಶೇಷ ನ್ಯಾಯಾಲಯವು 31 ಮಂದಿಯನ್ನು ಅಪರಾಧಿಗಳೆದು ಘೋಷಿಸಿತ್ತು. ಇದರಲ್ಲಿ 11 ಮಂದಿಗೆ ಮರಣದಂಡನೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ರೈಲಿನಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ಫೆಬ್ರವರಿ 27, 2002ರಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸ್ ಪ್ರೆಸ್ ನ ಎಸ್-6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಮಂದಿ ಹತ್ಯೆಯಾಗಿದ್ದರು. ಇದರ ಮುಂದುವರಿದ ಭಾಗವಾಗಿ ನಡೆದ ಗುಜರಾತ್ ಗಲಭೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಸಾವನ್ನಪ್ಪಿದ್ದರು.

ಸಾಬರಮತಿ ಎಕ್ಸ್ ಪ್ರೆಸ್ ನ ಎಸ್-6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಇದು ಯಾವುದೇ ಆಕಸ್ಮಿಕವಲ್ಲ ಎಂದು ಪ್ರಕರಣದ ತನಿಖೆಗೆ ಗುಜರಾತ್ ಸರ್ಕಾರವು ನೇಮಕ ಮಾಡಿದ್ದ ನಾನಾವತಿ ಆಯೋಗವು ವರದಿ ನೀಡಿತ್ತು.

ಗೋಧ್ರಾ ರೈಲು ಕಾಂಡದಲ್ಲಿ ಪ್ರಮುಖ ಆರೋಪಿಯಾಗಿದ್ದ ಮೌಲ್ವಿ ಸಯೀದ್ ಉಮ್ರಾಜಿಯನ್ನು ವಿಶೇಷ ನ್ಯಾಯಾಲಯವು ಬಿಡುಗಡೆ ಮಾಡಿತ್ತು. ಆದರೆ ಇದನ್ನು ಗುಜರಾತ್ ಸರ್ಕಾರವು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. 2011 ಎಪ್ರಿಲ್ 6ರಂದು ಗುಜರಾತ್ ಹೈಕೋರ್ಟ್ ಉಮ್ರಾಜಿಯನ್ನು ಅಪರಾಧಿಯನ್ನಾಗಿ ಘೋಷಿಸಿತ್ತು.

See also  ಮಮತಾ ಬ್ಯಾನರ್ಜಿಗೆ ಅತಿದೊಡ್ಡ ಆಘಾತ ನೀಡಿದ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು