News Kannada
Friday, October 07 2022

ದೇಶ-ವಿದೇಶ

ಭಾರತದ ಜನರಿಗೂ ಮಿಲಿಟರಿ ಆಡಳಿತ ಬೇಕಂತೆ! - 1 min read

Photo Credit :

ಭಾರತದ ಜನರಿಗೂ ಮಿಲಿಟರಿ ಆಡಳಿತ ಬೇಕಂತೆ!

ವಾಷಿಂಗ್ಟನ್: ಭಾರತದಲ್ಲಿ ನೆರೆಯ ಪಾಕಿಸ್ತಾನದಂತೆ ಮಿಲಿಟರಿ ಆಡಳಿತ ಬಂದರೆ ಹೇಗಿರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ ತಾನೇ? ಹೌದು ಎನ್ನುವವರು ಇದನ್ನು ಓದಲೇಬೇಕು. ಯಾಕೆಂದರೆ ಭಾರತದ ಜನಸಂಖ್ಯೆಯ ಗರಿಷ್ಠ ಜನರು ಮಿಲಿಟರಿ ಆಡಳಿತ ಬಯಸುತ್ತಾರೆಂದು ಸಮೀಕ್ಷೆಯೊಂದು ಹೇಳಿದೆ.

2012ರ ಬಳಿಕ ಭಾರತದ ಅರ್ಥವ್ಯವಸ್ಥೆಯು ಸುಮಾರು 6.9 ಶೇಕಡಾದಲ್ಲಿ ಬೆಳವಣಿಗೆ ಕಂಡಿದೆ. ಶೇ.85ರಷ್ಟು ಜನರು ಸರ್ಕಾರದ ಮೇಲೆ ನಂಬಿಕೆಯಿರಿಸಿಕೊಂಡಿದ್ದಾರೆ ಎಂದು ಪ್ಯೂ ಸಮೀಕ್ಷೆಯು ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ಏಳು ದಶಕಗಳಿಂದ ಪ್ರಜಾಪ್ರಭುತ್ವದಲ್ಲಿರುವ ಭಾರತದಲ್ಲಿ ಶೇ.55ರಷ್ಟು ಜನರು ಒಂದಲ್ಲ ಒಂದು ರೀತಿಯಿಂದ ಸರ್ವಾಧಿಕಾರಿ ಆಡಳಿತ ಬಯಸುತ್ತಾ ಇದ್ದಾರೆ. ಶೇ.27ರಷ್ಟು ಜನರು ಒಬ್ಬ ಬಲಿಷ್ಠ ನಾಯಕ ಬೇಕೆಂದು ಬಯಸುತ್ತಾರೆ ಎಂದು ಹಲವಾರು ರಾಷ್ಟ್ರಗಳಲ್ಲಿ ಸರ್ಕಾರ ಮತ್ತು ಜನರ ನಂಬಿಕೆ ಬಗ್ಗೆ ಸಮೀಕ್ಷೆ ನಡೆಸಿರುವ ಪ್ಯೂ ಸಮೀಕ್ಷೆ ಹೇಳಿದೆ.

ರಷ್ಯಾದಲ್ಲೂ ಶೇ.48ರಷ್ಟು ಜನರು ಬಲಿಷ್ಠ ನಾಯಕನ ಸರಕಾರ ಬೇಕೆಂದು ಬಯಸುವರು. ಆದರೆ ಬಲಿಷ್ಠ ನಾಯಕರ ಸರಕಾರವು ಹೆಚ್ಚು ಜನಪ್ರಿಯವಾಗಿರುವುದಿಲ್ಲ ಎಂದು ಹೇಳಿದೆ.

See also  ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೊಫಿ ಅನ್ನಾನ್ ವಿಧಿವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು