ನವದೆಹಲಿ: ಆಗಾಗ ಹೋಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಪಂಜಾಬ್ ನ ವ್ಯಕ್ತಿಯೊಬ್ಬನಿಗೆ ಪಾರ್ಶ್ವವಾಯು ಬಡಿದ ಘಟನೆ ನಡೆದಿದ್ದು, ಈ ವ್ಯಕ್ತಿಯ ಮಸಾಜ್ ಹುಚ್ಚು ಇದಕ್ಕೆ ಕಾರಣವೆಂದು ವೈದ್ಯರು ತಿಳಿಸಿದ್ದಾರೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಹೀಗೆ ಆಗಿದೆ. ಆದರೆ ಇದಕ್ಕೆ ಮುಖ್ಯವಾಗಿ ಪದೇ ಪದೇ ಮಾಡುತ್ತಿದ್ದ ಮಸಾಜ್ ಕಾರಣವೆಂದು ವೈದ್ಯರು ಹೇಳಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಪಂಜಾಬ್ ನ ಲೂದಿಯಾನಾದ 45ರ ಹರೆಯದ ವ್ಯಕ್ತಿ ಬಳಲಿಕೆಯಿಂದ ಮುಕ್ತಿ ಪಡೆಯಲು ವಾರದಲ್ಲಿ ಎರಡರಿಂದ ನಾಲ್ಕು ಸಲ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಎಂದು ಹೇಳಿದ್ದಾನೆ.
ದೇಹದ ಕೆಳಭಾಗದ ಆವಯವಗಳು ತುಂಬಾ ದುರ್ಬಲವಾಗಿದ್ದವು. ಇಷ್ಟು ಮಾತ್ರವಲ್ಲದೆ ಆತನಿಗೆ ಮಾತನಾಡಲು ಆಗುತ್ತಿರಲಿಲ್ಲ. ಆದರೆ ಈ ವ್ಯಕ್ತಿಗೆ ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ. ಇದನ್ನು ಮನಗಂಡು ವೈದ್ಯರು ಪಾರ್ಶ್ವವಾಯು ಎಂದು ನಿರ್ಧರಿಸಿದರು ಎಂದು ವರದಿಗಳು ಹೇಳಿವೆ.
ಕುತ್ತಿಗೆ ಮಸಾಜ್ ಮಾಡುವ ವೇಳೆ ರಕ್ತನಾಳಗಳ ಮೇಲೆ ಅತಿಯಾಗಿ ಒತ್ತಡಬಿದ್ದು ಮೆದುಳಿನಲ್ಲಿ ರಕ್ತಸಂಚಾರವಾಗದೆ ರಕ್ತ ಹೆಪ್ಪುಗಟ್ಟಿದೆ ಎಂದು ವರದಿಯಿಂದ ತಿಳಿದುಬಂದಿದೆ.