News Kannada
Monday, October 03 2022

ದೇಶ-ವಿದೇಶ

ನೀರಾವ್ ಮೋದಿಯ ದುಬಾರಿ ಬೆಲೆಯ ವಾಚ್ ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು - 1 min read

Photo Credit :

ನೀರಾವ್ ಮೋದಿಯ ದುಬಾರಿ ಬೆಲೆಯ ವಾಚ್ ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಆರೋಪಿಯಾದ ನೀರವ್ ಮೋದಿಯ ಮನೆ ಹಾಗೂ ಕಚೇರಿಗಳ ಮೇಲೆ ಶುಕ್ರವಾರವೂ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮನೆಯಲ್ಲಿದ್ದ ದುಬಾರಿ ಬೆಲೆಯ ವಾಚ್ಗಳನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರವೂ ದಾಳಿ ಮುಂದುವರಿಸಿದ ಅಧಿಕಾರಿಗಳು, ದುಬಾರಿ ವಾಚ್ಗಳು ಹಾಗೂ ವಿದೇಶದಿಂದ ಆಮದು ಮಾಡಿಕೊಂಡಿದ್ದ ಗೃಹಾಲಂಕಾರಿಕ ವಸ್ತುಗಳನ್ನು ವಶಪಡಿಕೊಂಡಿದ್ದಾರೆ. ಈ ಎಲ್ಲ ವಸ್ತುಗಳ ಮೌಲ್ಯ 44 ಕೋಟಿ ರೂ ಆಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಒಂಬತ್ತು ದಿನಗಳಿಂದ ನೀರಾವ್ ಮೋದಿಯ ಮನೆ, ಕಚೇರಿ ಮೇಲೆ ಅಧಿಕಾರಿಗಳು ಜಪ್ತಿ ಮಾಡುತ್ತಿದ್ದಾರೆ. ದಾಳಿ ವೇಳೆ ಅಧಿಕಾರಿಗಳಿಗೆ 30 ಕೋಟಿ ಮೌಲ್ಯದ ಬ್ಯಾಂಕ್ ಖಾತೆಗಳು, 13.86 ಕೋಟಿ ಮೌಲ್ಯ ಷೇರುಪತ್ರಗಳು ದೊರೆತಿದೆ ಎಂದು ತಿಳಿದು ಬಂದಿದೆ.

ಅದರ ಜತೆಗೆ 176 ಉಕ್ಕಿನ ಅಲ್ಮೇರಾಗಳು ದೊರೆತಿದ್ದು, 60 ಬಾಕ್ಸ್ಗಳಲ್ಲಿ ತುಂಬಿದ್ದ ದುಬಾರಿ ಬೆಲೆಯ ವಾಚ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಶೋಧ ಕಾರ್ಯ ಮುಂದುವರೆಸಿದ್ದಾರೆ.

 

See also  ಆಸ್ಪತ್ರೆಯಲ್ಲಿ 70 ಮಕ್ಕಳ ಮೃತಪಟ್ಟ ಪ್ರಕರಣ: ವೈದ್ಯ ಕಫೀಲ್ ಖಾನ್ ವಿರುದ್ಧದ ದೋಷಾರೋಪ ಕೈಬಿಟ್ಟ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು