News Kannada
Saturday, December 03 2022

ದೇಶ-ವಿದೇಶ

ಸಾರಿಗೆ ಇಲಾಖೆಯ ಸಹಾಯಕನ ಬಳಿ ರೂ 100ಕೋಟಿ ಆಸ್ತಿ ಪತ್ತೆ: ಬಂಧನ

Photo Credit :

ಸಾರಿಗೆ ಇಲಾಖೆಯ ಸಹಾಯಕನ ಬಳಿ ರೂ 100ಕೋಟಿ ಆಸ್ತಿ ಪತ್ತೆ: ಬಂಧನ

ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಸಾರಿಗೆ ಇಲಾಖೆಯ ಕಚೇರಿ ಸಹಾಯಕನಾಗಿರುವ ಕರಡು ನರಸಿಂಹ ರೆಡ್ಡಿ (55) ಅವರ ಬಳಿ ₹100 ಕೋಟಿ ಮೌಲ್ಯದ ಆಸ್ತಿ, 2 ಕೆ.ಜಿ ಚಿನ್ನ ಹಾಗೂ 7 ಕೆ.ಜಿ ಬೆಳ್ಳಿ ಪತ್ತೆಯಾಗಿದೆ.

ಕೇಂದ್ರ ತನಿಖಾ ಘಟಕದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಏಕಕಾಲದಲ್ಲಿ ಆರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ರೆಡ್ಡಿಯವರ ಬಳಿ ಆದಾಯಕ್ಕೂ ಮೀರಿದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು, ಅಕ್ರಮ ಆಸ್ತಿ ಸಂಪಾದನೆ ಆರೋಪದ ಪ್ರಕರಣ ದಾಖಲಿಸಿದ್ದಾರೆ.

ಯಾರ ಹೆಸರಲ್ಲಿದೆ ಆಸ್ತಿಗಳು: ರೆಡ್ಡಿ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸವಿದ್ದು, 18 ವಸತಿ ಸಮುಚ್ಚಯವನ್ನು ಹೊಂದಿದ್ದಾರೆ. ತನ್ನ ಹಾಗೂ ಪತ್ನಿ ಹೆಸರು ಅಲ್ಲದೆ ಅತ್ತೆಯ ಹೆಸರಿನಲ್ಲಿ 50 ಎಕರೆಗೂ ಹೆಚ್ಚು ಕೃಷಿ ಭೂಮಿ ಖರೀದಿಸಿರುವ ದಾಖಲೆಗಳು ಈ ವೇಳೆ ಲಭಿಸಿವೆ ಎಂದು ಎಸಿಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ರಮಾ ದೇವಿ ಮಾಧ್ಯಮಗಳಿಗೆ ತಿಳಿಸಿದರು.

ಎಸಿಬಿಯವರು ರೆಡ್ಡಿಯನ್ನು ಬಂಧಿಸಿದ ಬಳಿಕ ಸೇವೆಯಿಂದ ಅಮಾನತುಗೊಳಿಸಿದೆ. 1984ರ ಅಕ್ಟೋಬರ್ 22ರಂದು ಸಾರಿಗೆ ಇಲಾಖೆಗೆ ರೆಡ್ಡಿ ಸೇರಿದ್ದರು. ಇವರ ಸೇವಾ ಅವಧಿ 2023ರವರೆಗೂ ಇದೆ.

See also  ಸಾರಿಸ್ಕಾ ಅಭಯಾರಣ್ಯದಲ್ಲಿ ಗಾಯಗೊಂಡಿದ್ದ ಹುಲಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು