ನವದೆಹಲಿ: ಇನ್ನೂ ಎರಡು ದಿನಗಳಲ್ಲಿ ಉತ್ತರಖಂಡ ಹಾಗೂ ಹಿಮಾಚಲ ಪ್ರದೇಶದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನೂ ಉತ್ತರಖಂಡ ರಾಜ್ಯದ ಡೆಹ್ರಾಡೂನ್, ಹರಿದ್ವಾರ, ಪೌರಿ, ನೈತಿನಾಲ್, ಉದಮ್‌ಸಿಂಗ್ ನಗರ ಹಾಗೂ ಚಂಪಾವತ್ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.
ಉದಮ್‌ಸಿಂಗ್ ನಗರ, ಡೆಹ್ರಾಡೂನ್ ಹಾಗೂ ಉತ್ತರ ಕಾಶಿ ಜಿಲ್ಲೆಗಳಲ್ಲಿ ಗುರುವಾರವೂ ಭಾರಿ ಮಳೆಯಾಗಿದ್ದುಮ ಸುರಕ್ಷತೆ ನಿಟ್ಟಿನಲ್ಲಿ ಜನರನ್ನು ಸ್ಥಳಾಂತರಿಸಲು ಮಾಹಿತಿ ನೀಡಿಲಾಗಿದೆ. ಹಿಮಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.