News Kannada
Friday, December 02 2022

ದೇಶ-ವಿದೇಶ

ಗರ್ಭಿಣಿಯ ಪತಿಯ ಬರ್ಬರ ಕೊಲೆ: ತೆಲಂಗಾಣದಲ್ಲಿ ಮರ್ಯಾದೆಗೇಡು ಕೃತ್ಯ

Photo Credit :

ಗರ್ಭಿಣಿಯ ಪತಿಯ ಬರ್ಬರ ಕೊಲೆ: ತೆಲಂಗಾಣದಲ್ಲಿ ಮರ್ಯಾದೆಗೇಡು ಕೃತ್ಯ

ಹೈದರಾಬಾದ್:  ತೆಲಂಗಾಣ ರಾಜ್ಯದ ಮಿರಯಲಗುಡದಲ್ಲಿ 24 ವರ್ಷದ ಯುವಕ ಪ್ರಣಯ್ ಕುಮಾರ್‌ ಅವರನ್ನು ಹತ್ಯೆ ಮಾಡಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಎನ್ನಲಾಗಿದೆ. ಈ ಸಂಬಂಧ ಆತನ ಪತ್ನಿ ಅಮೃತಾ ವರ್ಷಿಣಿಯ ತಂದೆಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. 

ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್ ತನ್ನ 5 ತಿಂಗಳ ಗರ್ಭಿಣಿ ಪತ್ನಿ ಅಮೃತಾಳನ್ನು ಸ್ಥಳೀಯ ಆಸ್ಪತ್ರೆಯಿಂದ ತಪಾಸಣೆ ನಡೆಸಿ ಕರೆತರುವ ವೇಳೆ ದಾಳಿ ನಡೆದಿದೆ. ಕೆಳ ಜಾತಿಯವರನ್ನು ಮದುವೆಯಾದುದಕ್ಕೆ ಅಮೃತಾಳ ಮೇಲೆ ಸಂಬಂಧಿ ಶ್ರವಣ್ ಹಲವು ಬಾರಿ ಹಲ್ಲೆ ನಡೆಸಿದ್ದು, ಅವರನ್ನೂ ಪೊಲೀಸರು ಬಂಧಿಸಿದ್ದಾರೆ. 

ಅಮೃತಾಳ ತಂದೆ ಮಾರುತಿ ರಾವ್‌ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ಪ್ರಣಯ್ ಹತ್ಯೆಗಾಗಿ ₹5 ಲಕ್ಷ ಸುಪಾರಿ ಕೊಟ್ಟಿದ್ದರು. ರಾವ್‌ ಅವರಿಗೆ ಜಾತಿ ಮತ್ತು ಪ್ರತಿಷ್ಠೆಯೇ ಮುಖ್ಯವಾಗಿತ್ತು ಎಂದು ನಳಗೊಂಡ ಪೊಲೀಸರು ತಿಳಿಸಿದ್ದಾರೆ. 

ಇದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

See also  ಕಟ್ಟಡ ಕುಸಿದು ಬಿದ್ದು ಹತ್ತು ಮಂದಿ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು