News Kannada
Tuesday, February 07 2023

ದೇಶ-ವಿದೇಶ

ಒಡಿಶಾ: ಹೊಂಡದಲ್ಲಿ ಬಿದ್ದ ವಿದ್ಯುತ್ ಸ್ಪರ್ಶಿಸಿ 7 ಆನೆ ದಾರುಣ ಸಾವು

Photo Credit :

ಒಡಿಶಾ: ಹೊಂಡದಲ್ಲಿ ಬಿದ್ದ ವಿದ್ಯುತ್ ಸ್ಪರ್ಶಿಸಿ 7 ಆನೆ ದಾರುಣ ಸಾವು

ಒಡಿಶಾ: ನೀರಿನ ಹೊಂಡದ ಬಳಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು 7 ಆನೆಗಳು ಸಾವನ್ನಪ್ಪಿದ ದಾರುಣ ಘಟನೆ ಒಡಿಶಾದ ಧೆಂಕನಾಲ್ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಧೆಂಕನಾಲ್ ಜಿಲ್ಲೆಯ ಸ್ಥಳೀಯರು ಒಂದೇ ಹೊಂಡದಲ್ಲಿ 7 ಆನೆಗಳು ಸತ್ತು ಬಿದ್ದುರುವುದುನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಅವರು ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಸುದರ್ಶನ್ ಪಾಂಡ, ವಿದ್ಯುತ್ ಶಾಕ್ ನಿಂದ 7 ಆನೆಗಳು ಒಂದೇ ಹೊಂಡದಲ್ಲಿ ಸತ್ತು ಬಿದ್ದಿವೇ ಎಂದು ಸ್ಥಳೀಯರಿಂದ ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.

ಇದೊಂದು ಭೀಕರ ದುರಂತವಾಗಿದೆ. ಅರಣ್ಯ ಮೂಲಗಳ ಪ್ರಕಾರ, ಒಟ್ಟು 13 ಆನೆಗಳ ಹಿಂಡು ಈ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಹೊಂಡದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದೆ. ಇದರಿಂದ 7 ಆನೆಗಳು ಸಾವನ್ನಪ್ಪಿದ್ದು, ಉಳಿದ ಆನೆಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

See also  ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮನೆ ಸಮೀಪ ಗೂಢಾಚಾರಿಕೆ: ನಾಲ್ವರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು