ಲಖನೌ: ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೇಲೆ ಆಸ್ಪತ್ರೆಯ ಸಿಬ್ಬಂದಿ ಆತ್ಯಾಚಾರ ಎಸಗಿದ ಅಮಾನೀಯ ಘಟನೆ ಗುರುವಾರ ನಡೆದಿದೆ.
ವಿಷಪೂರಿತ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯನ್ನು ಐಸಿಯುವಿಗೆ ಶಿಫ್ಟ್ ಮಾಡಲಾಗಿತ್ತು. ಆರೋಪಿಗಳು ಕೃತ್ಯ ಎಸಗುವ ಮುನ್ನಾ ಆಕೆಗೆ ಮಂಪರು ಬರುವಂರೆ ಜೌಷಧಿ ನೀಡಿ ಮಂಚದ ಸುತ್ತಾ ಇದ್ದ ಕರ್ಟನ್ ಮುಚ್ಚಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿಗೆ ಮಾತನಾಡಲು ಕಷ್ಟವಾದಿದ್ದರಿಂದ ಪೋಷಕರ ಬಳಿ ನಡೆದ ಘಟನೆಯನ್ನು ಹೇಳಿಕೊಳ್ಳಲು ಕಷ್ಟ ಪಟ್ಟಿದ್ದಾಳೆ.
ನಂತರ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಆದ ಬಳಿಕ ಐಸಿಯುವಿನಲ್ಲಿ ನಡೆದ ಘಟನಾವಳಿಗಳನ್ನು ಹೇಳಿದ್ದಾಳೆ. ಈ ಕೃತ್ಯದಲ್ಲಿ ವಾರ್ಡ್ ಬಾಯ್ ಸೇರಿದಂತೆ ಐವರು ಸಿಬ್ಬಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.