ನವದೆಹಲಿ: ನರ್ಮದಾ ಸರೋವರ ದಂಡೆಯ ಮೇಲೆ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯು ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆಯಂತೆ.
ಅಮೆರಿಕಾದ ವಾಣಿಜ್ಯ ಉಪಗ್ರಹ ಜಾಲವಾದ ಪ್ಲಾನೆಟ್ ಲ್ಯಾಬ್ ಈ ಚಿತ್ರವನ್ನು ಸೆರೆ ಹಿಡಿದು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸ್ಟ್ಯಾಚ್ಯು ಲಿಬರ್ಟಿ ಆಫ್ ಪ್ರತಿಮೆಗಿಂತಲೂ ಎತ್ತರದ ಪ್ರತಿಮೆಯಾಗಿರುವ ಸ್ಟ್ಯಾಚು ಆಫ್ ಯುನಿಟಿ ಪ್ರತಿಮೆಯನ್ನು ಅ.31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ಈ ಪ್ರದೇಶದಲ್ಲಿ ಪ್ರತಿಮೆ ಮಾತ್ರವಲ್ಲದೆ ಮ್ಯೂಸಿಯಂ, ವೀಕ್ಷಣಾ ಗ್ಯಾಲರಿ, ಎಸ್ಕಲೇಟರ್, ಸೆಲ್ಫಿ ಪಾಯಿಂಟ್, ಶಾಪಿಂಗ್ ಪಾಯಿಂಟ್ ಇತ್ಯಾದಿಗಳು ಇವೆ.