ನವದೆಹಲಿ: ಮುಂದಿನ ಲೋಕಸಭಾ ಚುನಾವಣೆ ಹಾಗೂ ಘೋಷಣೆಯಾಗಿರುವಂತಹ ವಿಧಾನಸಭಾ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಬದಲು ಬ್ಯಾಲೆಟ್ ಪೇಪರ್ ಬಳಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು ಈ ಅರ್ಜಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಹೇಳಿ ನ್ಯಾಯಭೂಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಯಾವುದೇ ವ್ಯವಸ್ಥೆ ಮತ್ತು ಯಂತ್ರದಿಂದ ಲಾಭ ಹಾಗೂ ದುರ್ಲಾಭ ಪಡೆದುಕೊಳ್ಳಬಹುದು. ಸಂಶಯವೆನ್ನುವುದು ಇದ್ದೇ ಇರುತ್ತದೆ ಎಂದು ಪೀಠವು ಹೇಳಿದೆ.
ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಕಾಂಗ್ರೆಸ್, ಬಿಎಸ್ ಪಿ, ಎಸ್ ಪಿ ಸಹಿತ 17 ಪಕ್ಷಗಳು ಆಗಸ್ಟ್ ನಲ್ಲಿ ನಡೆದ ಚುನಾವಣಾ ಆಯೋಗದೊಂದಿಗಿನ ಸಭೆಯಲ್ಲಿ ಆಗ್ರಹಿಸಿದ್ದವು.