News Kannada
Tuesday, September 27 2022

ದೇಶ-ವಿದೇಶ

ಸೋಲಿಗೆ ನಾನೇ ಸಂಪೂರ್ಣ ಜವಾಬ್ದಾರ: ಶಿವರಾಜ್ ಸಿಂಗ್ ಚೌವ್ಹಾಣ್ - 1 min read

Photo Credit :

ಸೋಲಿಗೆ ನಾನೇ ಸಂಪೂರ್ಣ ಜವಾಬ್ದಾರ: ಶಿವರಾಜ್ ಸಿಂಗ್ ಚೌವ್ಹಾಣ್

ಭೋಪಾಲ್: ಕತ್ತುಕತ್ತಿನ ಹೋರಾಟದಲ್ಲಿ ಅಧಿಕಾರ ಕಳೆದುಕೊಂಡ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಸೋಲಿಗೆ ನಾನು ಮಾತ್ರ ಹೊಣೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚೌವ್ಹಾಣ್ ಅವರು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಸೋಲಿಗೆ ನಾನು ಮಾತ್ರ ಜವಾಬ್ದಾರಿ ಎಂದು ಹೇಳಿದರು. ಜನರ ತೀರ್ಪನ್ನು ನಾನು ಗೌರವಿಸುತ್ತೇನೆ. ಇದು ತುಂಬಾ ಕಠಿಣ ಹೋರಾಟವಾಗಿತ್ತು. ರಾಜ್ಯದಲ್ಲಿ ಕೆಲವು ಜನರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಮತ್ತು ಸೋಲಿಗೆ ನಾನೇ ಜವಾಬ್ದಾರನಾಗಿದ್ದೇನೆ ಎಂದರು.

ಮಧ್ಯಪ್ರದೇಶದ ಏಳಿಗೆ ಹಾಗೂ ಅಭಿವೃದ್ಧಿಗೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಚೌವ್ಹಾಣ್ ತಿಳಿಸಿದರು. ಸೋಲು ಮತ್ತು ಗೆಲುವು ಚುನಾವಣೆಯ ಒಂದು ಭಾಗ. ರಾಜ್ಯದ ಜನರು ಮತ್ತು ಇಲ್ಲಿನ ಜನರ ಏಳಿಗೆಯನ್ನು ನಾನು ನೋಡಿಕೊಳ್ಳಲಿದ್ದೇನೆ. ಈಗ ಚೌಕಿದಾರನಾಗಲು ನನಗೆ ಸಮಯ ಬಂದಿದೆ ಮತ್ತು ಏನೇ ತಪ್ಪಾದರೂ ನಾನು ಅದರ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದರು.

See also  40ರ ವಯಸ್ಸಿನಲ್ಲಿ 69 ಮಕ್ಕಳಿಗೆ ಜನ್ಮ ನೀಡಿ ಪ್ರಾಣಬಿಟ್ಟ ಪ್ಯಾಲಸ್ತೀನ್ ಮಹಿಳೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು