ನವದೆಹಲಿ: ಮದುವೆ ಮಂಟಪದಲ್ಲಿವಧು-ವರ ಹೂ ಮಾಲಡ ಹಾಕುವ ವೇಳೆ ವ್ಯಕ್ತಿಯೊಬ್ಬ ವಧುವಿಗೆ ಗುಂಡು ಹಾರಿಸಿದ ಘಟನೆ ದೆಹಲಿಯ ಶಂಕರ್ ಪುರ್ ನಲ್ಲಿ ಗುರುವಾರ ನಡೆದಿದೆ.
19 ವರ್ಷದ ವಧು ಪೂಜಾ ಕಾಲಿಗೆ ಗಾಯವಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣ ಗಾಯಗೊಂದಿಗೆ ಪಾರಾದ ಪೂಜಾಳನ್ನು ಆಸ್ಪತ್ರೆಯಿಂಧ ಡಿಸ್ಚಾರ್ಜ್ ಆದ ನಂತರ ಮದುವೆ ಕಾರ್ಯವನ್ನು ಮುಂದುವರೆಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.