ಮಾಸ್ಕೋ: ರಷ್ಯಾ ಕರಾವಳಿಯಲ್ಲಿ ಎರಡು ಹಡಗುಗಳಿಗೆ ಬೆಂಕಿ ಹತ್ತಿಕೊಂಡು ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆಯು ನಡೆದಿದೆ.
ಈ ಎರಡು ಹಡಗುಗಳಲ್ಲಿ ಭಾರತ, ಟರ್ಕಿ ಮತ್ತು ಲಿಬಿಯಾದ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ. ಇಂಧನ ವರ್ಗಾವಣೆ ಮಾಡುತ್ತಿದ್ದ ವೇಳೆ ಹಡಗಿಗೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಒಂದು ಹಡಗಿನಲ್ಲಿ 8 ಮಂದಿ ಭಾರತೀಯರು, 9 ಟರ್ಕಿ ಪ್ರಜೆಗಳಿದ್ದರು. ಮತ್ತೊಂದು ಹಡಗಿನಲ್ಲಿ ಭಾರತ ಮತ್ತು ಟರ್ಕಿಯ ತಲಾ 7 ಮತ್ತು ಲಿಬಿಯಾದ ಒಬ್ಬರು ಸಿಬ್ಬಂದಿ ಇದ್ದರು ಎಂದು ವರದಿಗಳು ತಿಳಿಸಿವೆ.