ನವದೆಹಲಿ: ಕೇಂದ್ರ ಸರ್ಕಾರ ಮರಣೋತ್ತರವಾಗಿ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ನೀಡಿದ್ದ ಭಾರತ ರತ್ನ ಪ್ರಶಸ್ತಿಯನ್ನು ಅವರ ಪುತ್ರ ತೇಜಾ ಹಜಾರಿಕಾ ಅವರು ನಿರಾಕರಿಸಿದ್ದಾರೆ.
ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಭೂಪೇನ್ ಹಜಾರಿಕಾ ಅವರಿಗೆ ನೀಡಿದ್ದ ಭಾರತ ರತ್ನ ನಿರಾಕರಿಸಿರುವುದಾಗಿ ಹಜಾರಿಕಾ ಕುಟುಂಬ ಹೇಳಿದೆ.
ತನ್ನ ಅಪ್ಪನ ನಂಬಿಕೆಗೆ ವಿರುದ್ಧವಾಗಿರುವ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲು ಸಿದ್ಧತೆ ನಡೆಸಿರುವುದು ನನಗೆ ಅಸಮಾಧಾನವನ್ನುಂಟು ಮಾಡಿದೆ. ಈ ಹಿನ್ನೆಲೆ ಭಾರತ ರತ್ನ ನಿರಾಕರಿಸಿರುವುದಾಗಿ ಹಜಾರಿಕಾ ಪುತ್ರ ತೇಜ್ ಹಜಾರಿಕಾ ಹೇಳಿದ್ದಾರೆ.
ಜ.26ರಂದು ಹಜಾರಿಕಾ ಅವರಿಗೆ ಮರಣೋತ್ತರ ಭಾರತರತ್ನ ಘೋಷಿಸಲಾಗಿತ್ತು.