ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಆಳೆತ್ತರದ ಭಾವಚಿತ್ರವನ್ನು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅನಾವರಣಗೊಳಿಸಿದರು.
ವಾಜಪೇಯಿ ಅವರು ಅಪಾರ ಸಹನೆ, ತಾಳ್ಮೆ, ಸಹೃದಯತೆ ತೋರುವ ಮೂಲಕ ಅಜಾತಶತ್ರು ಆಗಿದ್ದರು ಎಂದು ರಾಷ್ಟ್ರಪತಿ ಕೋವಿಂದ್ ತಿಳಿಸಿದರು.
ವಾಜಪೇಯಿ ಅವರು ನಗುಮೊಗದಲ್ಲಿ ಇರುವ ಈ ಭಾವಚಿತ್ರವನ್ನು ರಚಿಸಿದ ಕಲಾವಿದ ಕೃಷ್ಣ ಕನ್ಹಯ್ಯ ಅವರನ್ನು ರಾಷ್ಟ್ರಪತಿ ಸನ್ಮಾನಿಸಿದರು.