ಜಮ್ಮು-ಶ್ರೀನಗರ: ಪುಲ್ವಾಮ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಯ ರಶೀದ್ ಘಾಜಿ ಹಾಗೂ ಕಮ್ರಾನ್ ನನ್ನು ಭಾರತೀಯ ಸೇನೆ ಹತ್ಯೆಗೈದಿದೆ ಎಂದು ವರದಿಯಾಗಿದೆ.
45 ಯೋಧರನ್ನು ಬಲಿ ಪಡೆದಿದ್ದ ಉಗ್ರನನ್ನು ಸೇನೆ ಸೋಮವಾರ ದೀರ್ಘಕಾಲದ ಕಾರ್ಯಾಚರಣೆ ನಡೆಸಿ ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಬೆಳಿಗ್ಗೆ ಉಗ್ರರ ಹಾಗೂ ಸೇನೆ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಮೇಜರ್ ಸಹಿತ ನಾಲ್ವರು ಯೊಧರು ಸೇರಿ ಒಬ್ಬ ನಾಗರೀಕ ಹುತಾತ್ಮರಾಗಿದ್ದರು. ಇನ್ನೂ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.