News Kannada
Wednesday, December 07 2022

ದೇಶ-ವಿದೇಶ

ಜಯಪ್ರದಾ ವಿರುದ್ಧ ಕೀಳು ಮಾತು: ಎಸ್ ಪಿ ನಾಯಕ ಅಜಂ ಖಾನ್ ವಿರುದ್ಧ ಎಪ್ ಐಆರ್

Photo Credit :

ಜಯಪ್ರದಾ ವಿರುದ್ಧ ಕೀಳು ಮಾತು: ಎಸ್ ಪಿ ನಾಯಕ ಅಜಂ ಖಾನ್ ವಿರುದ್ಧ ಎಪ್ ಐಆರ್

ರಾಂಪುರ: ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ಧ ತುಂಬಾ ಕೀಳು ಭಾಷೆ ಬಳಸಿ ಮಾತನಾಡಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ಉತ್ತರ ಪ್ರದೇಶದ ರಾಂಪುರದ ಶಾಹಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಚುನಾವಣಾ ಪ್ರಚಾರದ ವೇಳೆ ಅಜಂ ಖಾನ್ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎದುರೇ ಜಯಪ್ರದಾ ಬಗ್ಗೆ ಕೀಳಾಗಿ ಮಾತನಾಡಿದ್ದರು.

ಜಯಪ್ರದಾರನ್ನು ರಾಜಕೀಯಕ್ಕೆ ಕರೆತಂದಿರುವುದು ನಾನು. ರಾಂಪುರದಿಂದ ಟಿಕೆಟ್ ಕೂಡ ಕೊಡಿಸಿದೆ. ಆದರೆ ಆಕೆಯನ್ನು 17 ವರ್ಷಗಳಲ್ಲಿ ಯಾರೂ ಸ್ಪರ್ಶಿಸದಂತೆ ಬಾಡಿಗಾರ್ಡ್ ರೀತಿ ಕೆಲಸ ಮಾಡಿದೆ. ಆದರೆ 17 ದಿನಗಳ ಹಿಂದೆ ಆಕೆಯ(ಬರೆಯಲು ಸಾಧ್ಯವಿಲ್ಲದ್ದು) ಬಗ್ಗೆ ತಿಳಿಯಿತು ಎಂದು ಅಜಂ ಖಾನ್ ಹೇಳಿದ್ದರು.

ಶಾಹಬಾದ್ ಮ್ಯಾಜಿಸ್ಟ್ರೇಟ್ ಮಹೇಶ್ ಕುಮಾರ್ ಗುಪ್ತಾ ಅವರ ದೂರಿನಂತೆ ಎಫ್ ಐಆರ್ ದಾಖಲಾಗಿದೆ.

See also  ತ್ರಿವಳಿ ತಲಾಖ್ ನೀಡಿದವರಿಗೆ 3ವರ್ಷ ಶಿಕ್ಷೆ: ಮಸೂದೆಯ ಕರಡು ಸಿದ್ಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು