ನವದೆಹಲಿ: ಕೇರಳದ ವಿದ್ಯಾರ್ಥಿಯೊಬ್ಬನಲ್ಲಿ ನಿಫಾ ವೈರಸ್ ಸೋಂಕು ದೃಢ ಪಟ್ಟ ಹಿನ್ನೆಲೆ ಕೇಂದ್ರದಿಂದ 6 ಜನರ ತಜ್ಷರ ತಂಡವನ್ನು ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ತಿಳಿಸಿದ್ದಾರೆ.
ವಿದ್ಯಾರ್ಥಿಯೊಬ್ಬನಲ್ಲಿ ನಿಫಾ ವೈರಸ್ ದೃಢ ಪಟ್ಟಿರುವುದರಿಂದ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ನಿಂದಾಗಿ 17 ಮಂದಿ ಜೀವವನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರು ಕೇರಳ ಆರೋಗ್ಯ ಸಚಿವೆ ಕೆ. ಕೆ .ಶೈಲಜಾ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಕೇಂದ್ರದಿಂದ ನೆರವನ್ನು ಕೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯು ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡು ಕೂಡಲೇ 6 ಜನರ ತಜ್ಞರ ತಂಡವನ್ನು ಕಳಹಿಸಿಕೊಂಡಿದೆ. ನಿಫಾ ವೈರಲ್ ಹರಡದಂತೆ ಮತ್ತು ರಕ್ಷಣೆಯ ಕುರಿತು ಮುಂಜಾಗೃತೆ ವಹಿಸುವ ಕುರಿತು ತಜ್ಞರ ತಂಡ ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ.
ಸಚಿವೆ ಶೈಲಜಾ ಮಾತನಾಡಿ, ಇದೀಗ ಒಬ್ಬ ವಿದ್ಯಾರ್ಥಿಯಲ್ಲಿ ನಿಫಾ ವೈರಸ್ ಸೋಂಕಿರುವುದು ಪತ್ತೆಯಾಗಿದ್ದು, 86ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ .ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಅಪಾಯವಿಲ್ಲ. ವಿದ್ಯಾರ್ಥಿ ಎರ್ನಾಕುಲಂ ಜಿಲ್ಲೆಯವನಾಗಿದ್ದು, ಇಡುಕ್ಕಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.
ಈ ಸಂಬಂದ ಪ್ರತಿಕ್ರಿಯಿಸಿದ ಸಚಿವ ಹರ್ಷವರ್ಧನ, ಕೇಂದ್ರದಿಂದ ಸಹಾಯವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದೇವರ. 6ಸದಸ್ಯರ ತಂಡವನ್ನು ರಾಜ್ಯಕ್ಕೆ ಕಳುಹಿಸಲಾಗಿದ್ದು ಈ ಹಿಂದೆ ಕಾಣಿಸಲ್ಪಟ್ಟ ನಿಫಾ ವೈರಸ್ ನ ಬಗ್ಗೆ ಹಾಗೂ ಪ್ರಸ್ತುತ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮದ ಬಗ್ಗೆ ಚಿಂತಿಸಲಾಗಿದೆ. ಯಾರು ಆತಂಕ್ಕಕೆ ಒಳಪಡುವ ಅಗತ್ಯವಿಲ್ಲ ಎಂದರು.