ಮಧ್ಯಪ್ರದೇಶ: ಬಿಸಿಲಿನ ಆಘಾತಕ್ಕೆ 15ಮಂಗಗಳು ಸಾವನ್ನಪ್ಪಿದ್ದ ಘಟನೆ ಬಾಗ್ಲಿಯ ಜೋಶಿ ಬಾಬ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಜನತೆ ತತ್ತರಿಸಿ ಹೋಗಿದ್ದು ಮಧ್ಯಪ್ರದೇಶದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದೆ.
ಇದರಿಂದ ನೀರಿಲ್ಲದೆ ಪ್ರಾಣಿಗಳು ಕಾಡಿನಿಂದ ನಾಡಿಗೆ ವಲಸೆ ಬರುತ್ತಿದ್ದು ನೀರಿಲ್ಲದೆ ಅಲ್ಲಲ್ಲಿ ಪ್ರಾಣಿಗಳ ಮಾರಣಹೋಮವಾಗುತ್ತಿದೆ. ನೀರಿಲ್ಲದೆ ಒಂದೇ ಪ್ರದೇಶದಲ್ಲಿ 15ಮಂಗಗಳು ಸಾವನ್ನಪ್ಪಿದ್ದು, ಇದೀಗ ಮಂಗಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.