ನವದೆಹಲಿ: ಇನ್ನು ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ನೀವು ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿಲ್ಲ. ಯಾಕೆಂದರೆ ಇದನ್ನು ಸೂಪರ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಪೆಟ್ರೋಲಿಯಂ ಸಚಿವಾಲಯವು ಈ ಬಗ್ಗೆ ಇರುವಂತಹ ಅಡೆತಡೆ ನಿವಾರಣೆ ಮಾಡಲು ಸದ್ಯದಲ್ಲೇ ಸಚಿವ ಸಂಪುಟದ ಸಭೆಯಲ್ಲಿ ಇದಕ್ಕೆ ಅನುಮತಿ ಪಡೆಯಲಿದೆ.
ಇನ್ನು ಮುಂದೆ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ್ನು ವಿತರಿಸುವ ಬಗ್ಗೆ ಚಿಂತನೆ ಮಾಡಲಾಗಿದೆ.
ಪೆಟ್ರೋಲ್ ಪಂಪ್ ಗಿಂತ ಹೊರತಾಗಿ ಇದು ಬೇರೆ ಕಡೆಗಳಲ್ಲೂ ಸಿಗುವಂತೆ ಆಗಬೇಕು ಎನ್ನುವುದೇ ಸರ್ಕಾರದ ಯೋಜನೆಯಾಗಿದೆ.