ನವದೆಹಲಿ: ತಂಬಾಕು ಸೇವನೆ ಮಾಡುವ ಕಾರಣದಿಂದಾಗಿ ಹತ್ತು ಜನರಲ್ಲಿ ಇಬ್ಬರು ಹೃದಯ ರೋಗದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ) ಹೇಳಿದೆ.
ವಿಶ್ವದಲ್ಲಿ ಹತ್ತು ಜನರಲ್ಲಿ ಒಬ್ಬರು ಹೃದಯ ರೋಗದಿಂದ ಸಾಯಲು ತಂಬಾಕು ಕಾರಣ ಎಂದು ವಿಶ್ವಸಂಸ್ಥೆ ತಿಳಿಸಿದ್ದು, ತಂಬಾಕಿನಿಂದ ದೂರ ಉಳಿದು ಆರೋಗ್ಯ ರಕ್ಷಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದೆ.
ತಂಬಾಕು ಸೇವನೆಗೆ ಪ್ರಚೋದಿಸುವ ಎಲ್ಲಾ ಜಾಹೀರಾತು ಮತ್ತು ಪ್ರಾಯೋಜಕತ್ವ ನಿಷೇಧಿಸಬೇಕು. ತಂಬಾಕು ಕಂಪೆನಿಗಳು ಸಂಗೀತ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಪ್ರಾಯೋಜಕತ್ವ ವಹಿಸುವುದನ್ನು ನಿಷೇಧಿಸಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
ಈ ಬಗ್ಗೆ ಸೆಲೆಬ್ರಿಟಿಗಳು ಜಾಗೃತಿ ಮೂಡಿಸಬೇಕು. ತಂಬಾಕು ರಹಿತ ಉತ್ಪನ್ನಗಳ ಬಳಕೆ ಮಾಡುವಂತೆ ಕಂಪೆನಿಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದೆ.