News Kannada
Friday, September 30 2022

ದೇಶ-ವಿದೇಶ

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಯಡಿಯೂರಪ್ಪ: ಪ್ರವಾಹ ಪರಿಹಾರಕ್ಕೆ ಮನವಿ - 1 min read

Photo Credit :

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಯಡಿಯೂರಪ್ಪ: ಪ್ರವಾಹ ಪರಿಹಾರಕ್ಕೆ ಮನವಿ

ನವದೆಹಲಿ: ಕರ್ನಾಟಕ ಪ್ರವಾಹ ಪರಿಹಾರ ಸಂಬಂಧಿಸಿದಂತೆ ಮಾತನಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾದರು.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಕೇಂದ್ರ ಸಚಿವ ಸುರೇಶ್ ಅಂಗಡಿ, ಹಾಗೂ ಪ್ರಹ್ಲಾದ್ ಜೋಶಿ ಈ ವೇಳೆ ಇದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ‘ಪ್ರಧಾನಿ ಮೋದಿ ಅವರ ಜತೆ ದೀರ್ಘ ಕಾಲ ಕರ್ನಾಟಕದ ಪ್ರವಾಹದ ಬಗ್ಗೆ ಮಾತನಾಡಲಾಯಿತು. ಪ್ರವಾಹದ ಪರಿಹಾರ ಸಂಬಂಧ ಲ್ಲೆ ಶೀಘ್ರವೇ ಪರಿಹಾರವನ್ನು ನೀಡುವಂತೆ ಮನವಿಯನ್ನು ಮಾಡಿದ್ದು, ಮೋದಿ ಅವರು ಭರವಸೆಯನ್ನು ನೀಡಿದ್ದಾರೆ ಎಂದರು.

ಕರ್ನಾಟಕ ಪ್ರವಾಹ, 61 ಜೀವ ಬಲಿ: ಕರ್ನಾಟಕ ರಾಜ್ಯ ಪ್ರಕೃತಿಕ ವಿಪತ್ತು ನಿರ್ವಹಣಾ ಮಂಡಳಿ ವರದಿ ಪ್ರಕಾರ ಕರ್ನಾಟಕ ಪ್ರವಾಹದಲ್ಲಿ 61 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 22 ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿದ್ದು ಬೆಳಗಾವಿಯಲ್ಲಿ 15ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ. 

ರಕ್ಷಣಾ ಪಡೆ ಇದುವರೆಗೆ 7ಲಕ್ಷ ಜನರನ್ನು ರಕ್ಷಿಸಿದ್ದು, 3,75,663 ನೆರೆ ಸಂತ್ರಸ್ತರು 1,096 ಪುನರ್ವಸತಿ ಕೇಂದ್ರದಲ್ಲಿ ಆಸರೆಯನ್ನು ಪಡೆದುಕೊಂಡಿದ್ದಾರೆ

See also  ರೇಡಿಯೋ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆದ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು