ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಹಾರ ಮಾಜಿ ಸಿಎಂ ಹಾಗೂ ಜೆಡಿಯು ನಾಯಕ ಜಗನ್ನಾಧ್ ಮಿಶ್ರಾ ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜಗನ್ನಾಥ್(82) ಅವರನ್ನು ಕೆಲ ದಿನಗಳ ಹಿಂದೆಯೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಮಿಶ್ರಾ ಅವರು ಕೊನೆಯುಸಿರೆಳೆದಿದ್ದಾರೆ. ಜಗನ್ನಾಥ್ ಅವರು ಮೂರು ಭಾರೀ ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಪ್ರಬಲ ನಾಯಕರಲ್ಲಿ ಒಬ್ಬರಾದ ಮಿಶ್ರಾ ಅವರ ಹೆಸರು ಮೇವು ಹಗರಣದಲ್ಲಿ ಕೇಳಿಬಂದಿತ್ತೂ. ಮಿಶ್ರಾ ಸಾವಿಗೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.