ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಐಜಿಐ)ದಲ್ಲಿ ಆರ್ ಡಿಎಕ್ಸ್ ಇರುವ ಬ್ಯಾಗ್ ಒಂದು ಶುಕ್ರವಾರ ಬೆಳಗಿನ ಜಾವ ಪತ್ತೆಯಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಟರ್ಮಿನಲ್-3ರ ಪಿಲ್ಲರ್ ನಾಲ್ಕರ ಬಳಿಯಲ್ಲಿ ಅನಾಥ ಕಪ್ಪು ಬ್ಯಾಗ್ ಒಂದು ಇರುವುದನ್ನು ಸಿಐಎಸ್ ಎಫ್ ಕಾನ್ ಸ್ಟೇಬಲ್ ವಿಕೆ ಸಿಂಗ್ ಅವರು ಗುರುತಿಸಿದ್ದಾರೆ. ಇದರ ಬಳಿಕ ಸುರಕ್ಷತೆಯನ್ನು ತಕ್ಷಣವೇ ಹೆಚ್ಚು ಮಾಡಲಾಗಿದೆ.
ವಿಕೆ ಸಿಂಗ್ ಅವರು ತಕ್ಷಣವೇ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಆ ಬ್ಯಾಗ್ ನ್ನು ಪರೀಕ್ಷಿಸಿದ ವೇಳೆ ಅದರಲ್ಲಿ ಆರ್ ಡಿಎಕ್ಸ್ ಕಂಡುಬಂದಿದೆ. ಶ್ವಾನ ದಳವು ಈ ಬ್ಯಾಗ್ ನ್ನು ಪರಿಶೀಲನೆ ಮಾಡಿದೆ. ಬಾಂಬ್ ನಿಷ್ಕ್ರೀಯ ದಳ ಮತ್ತು ಬಾಂಬ್ ಪತ್ತೆ ದಳವು ತಕ್ಷಣವೇ ಆಗಮಿಸಿ ಪ್ರದೇಶವನ್ನು ಸುತ್ತುವರಿದಿದೆ.