ಚಂಢೀಗಡ: ತಮಿಳುನಾಡಿನಲ್ಲಿ ಬಾಲಕನೊಬ್ಬ ಕೊಳವೆಬಾಯಿಗೆ ಬಿದ್ದ ಸಾವನ್ನಪ್ಪಿದ ಘಟನೆಯು ಇನ್ನು ಹಸಿರಾಗಿರುವಾಗಲೇ ಚಂಡೀಗಡದಲ್ಲಿ ಕೂಡ ಇದೇ ರೀತಿ ಐದರ ಹರೆಯದ ಬಾಲಕಿಯು ಮೃತಪಟ್ಟಿದ್ದಾಳೆ.
ಸುಮಾರು 50 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಬಾಲಕಿಯನ್ನು ಹೊರಗೆ ತೆಗೆಯಲು ಸುಮಾರು 18 ಗಂಟೆಗಳ ಕಾಲ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಎನ್ ಡಿಆರ್ ಎಫ್ ತಂಡ ಪ್ರಯತ್ನಿಸಿದರೂ ಯಾವುದೇ ಫಲ ನೀಡಲಿಲ್ಲ.
ಬಾಲಕಿಯ ಮೃತದೇಹವನ್ನು ಹೊರಗೆ ತೆಗೆಯಲಷ್ಟೇ ಸಾಧ್ಯವಾಯಿತು ಎಂದು ಹರಿಯಾಣದ ಕರ್ನಾಲ್ ಜಿಲ್ಲಾಡಳಿತ ತಿಳೀಸಿದೆ.