ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಏನೆಲ್ಲಾ ಹೇಳಿದೆ ಎಂದು ತಿಳಿಯುವ.
- ಈ ಐತಿಹಾಸಿಕ ತೀರ್ಪಿಗಾಗಿ ದೇಶವೇ ಕಾತರಿಸಿತ್ತು. ತೀರ್ಪು ನೀಡಿದ ಐದು ಸದಸ್ಯರ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಎಸ್. ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದರು.
- ಬಾಬ್ರಿ ಮಸೀದಿಯನ್ನು ಖಾಲಿ ಜಾಗದ ಮೇಲೆ ನಿರ್ಮಿಸಿಲ್ಲ. ಅಲ್ಲಿ ಮಂದಿರದ ಅವಶೇಷಗಳಿದ್ದವು.
- ಅಯೋಧ್ಯೆ ರಾಮಜನ್ಮಭೂಮಿ ಎಂದು ಹಿಂದೂಗಳು ಒಪ್ಪಿಕೊಂಡಿರುವುದರಲ್ಲಿ ಯಾವುದೇ ವಿವಾದವಿಲ್ಲ.
- ನಿರ್ಮೋಹಿ ಅಖಾಡದ ಅರ್ಜಿ ವಜಾ, ರಾಮಲಲ್ಲಾ ಮುಖ್ಯ ಅರ್ಜಿದಾರ.
- ಪುರುತತ್ವ ಇಲಾಖೆಯು ನಡೆಸಿರುವಂತಹ ಉತ್ಖನನದ ವೇಳೆ ಸಿಕ್ಕಿದ ಸಾಕ್ಷಿಗಳನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್.
- ಹಿಂದೂಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ನಂಬಿದ್ದಾರೆ. ಹಿಂದೂಗಳ ನಂಬಿಕೆ ವಿವಾದರಹಿತವಾಗಿದೆ. ಇದರಲ್ಲಿ ಅವರ ಧಾರ್ಮಿಕ ಭಾವನೆಗಳಿವೆ.
- ಮಸೀದಿಯಲ್ಲಿ ಕಟ್ಟುವ ಮೊದಲು ಅಲ್ಲಿ ಬೇರೆ ಕಟ್ಟಡವಿತ್ತು. ಇದಕ್ಕೆ ಪುರಾತತ್ವ ಇಲಾಖೆಯು ಸಾಕ್ಷಿ ನೀಡಿದೆ ಮತ್ತು ಮಸೀದಿಯು ಇಸ್ಲಾಮಿಕ್ ಮೂಲ ಹೊಂದಿಲ್ಲವೆಂದು ಪುರಾತತ್ವ ಇಲಾಖೆ ಹೇಳಿತ್ತು.
- ಜಾಗವನ್ನು ಮೂರು ಭಾಗ ಮಾಡಿರುವುದಕ್ಕೆ ಸಂಪೂರ್ಣ ವಿರೋಧವಿದೆ.
- ಮಸೀದಿಗೆ ಹಾನಿ ಮಾಡಿ ಕಾನೂನು ಕೈಗೆತ್ತಿಗೊಂಡಿರುವುದು ಸರಿಯಲ್ಲ.
- ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಮಂಡಳಿ ರೂಪಿಸಿ.
- ಸುನ್ನಿ ವಕ್ಫ್ ಬೋರ್ಡ್ ಗೆ ಪ್ರತ್ಯೇಕವಾಗಿ ಐದು ಎಕರೆ ಜಾಗ ನೀಡಲು ಸೂಚನೆ.
- ಮಂದಿರ ನಿರ್ಮಾಣ ಹೊಣೆ ಸರ್ಕಾರಕ್ಕೆ, ನಿರ್ವಹಣೆ ಟ್ರಸ್ಟ್ ಗೆ ನೀಡಲು ಆದೇಶ.
- 3-4 ತಿಂಗಳ ಒಳಗಡೆ ರಾಮ ಮಂದಿರ ಮತ್ತು ಪರ್ಯಾಯ ಭೂಮಿ ಮಸೀದಿಗೆ ನೀಡಲು ಸುಪ್ರೀಂ ಸೂಚನೆ.