ಮುಂಬಯಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರೂ ತೆರೆಮರೆಯಲ್ಲಿ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಲೇ ಇದ್ದು, ಶಿವಸೇನೆ-ಎನ್ ಸಿಪಿಯು 50-50 ಸರ್ಕಾರ ರಚನೆಗೆ ಮುಂದಾಗಿದೆ ಮತ್ತು ಕಾಂಗ್ರೆಸ್ ಉಪಮುಖ್ಯಮಂತ್ರಿ ಸ್ಥಾನ ಪಡೆಯುವುದಾಗಿ ಮೂಲಗಳು ಹೇಳಿವೆ.
ಶರದ್ ಪವಾರ್ ನೇತೃತ್ವದ ಎನ್ ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಅಧಿಕಾರವನ್ನು 50-50 ಹಂಚಿಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಅದೇ ರೀತಿಯಾಗಿ 2.5 ವರ್ಷಗಳ ಸಿಎಂ ಸ್ಥಾನವನ್ನು ಹಂಚಿಕೊಳ್ಳಲು ಮತ್ತು ಕಾಂಗ್ರೆಸ್ ಗೆ 5 ವರ್ಷಗಳ ಕಾಲ ಉಪಮುಖ್ಯಮಂತ್ರಿ ಸ್ಥಾನ ನೀಡಲು ಇಲ್ಲಿ ನಿರ್ಧರಿಸಲಾಗಿದೆ ಎಂದು ವರದಿಗಳು ಹೇಳಿವೆ.
ಆದರೆ ಸ್ಪೀಕರ್ ಹುದ್ದೆ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ವರದಿಗಳು ತಿಳಿಸಿವೆ.