ನವದೆಹಲಿ: ಜವಾಹರ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಇಂದು ಸಂಸತ್ತಿಗೆ ಪ್ರತಿಭಟನೆ ಕೊಂಡೊಯ್ಯುತ್ತಿದ್ದ ಕೆಲವು ಮಾಧ್ಯಮಗಳ ಜತೆಗೆ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ಹಾಸ್ಟೆಲ್ ಶುಲ್ಕ ಮತ್ತು ಇತರ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಜೆಎನ್ ಯು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವರದಿಗೆ ತೆರಳಿದ್ದ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ.
ಇಂದು ಕೂಡ ಸಂಸತ್ತಿಗೆ ಮರ್ಚ್ ತೆಗೆಯುವ ವೇಳೆಯು ಇದೇ ರೀತಿಯ ಘಟನೆ ನಡೆದಿದೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ಕೈಕೈ ಮಿಲಾಯಿಸುವಷ್ಟು ವಾತಾವರಣವು ಬಿಗಿಯಾಗಿದ್ದು, ಬಳಿಕ ವಿದ್ಯಾರ್ಥಿಗಳನ್ನು ತಡೆಯಲಾಯಿತು.