ನವದೆಹಲಿ: ಸಂಸತ್ತಿನ ಬಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ನಮ್ಮ ಮೇಲೆ ಲೋಕಸಭೆಯ ಮಾರ್ಷಲ್ ಗಳು ಹಲ್ಲೆ ಮಾಡಿದರು ಎಂದು ಇಬ್ಬರು ಮಹಿಳಾ ಸಂಸದರು ಸೋಮವಾರ ದೂರು ನೀಡಿದ್ದಾರೆ.
ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಲು ಕಾಂಗ್ರೆಸ್ ನ ಸಂಸದೆಯರಿಬ್ಬರು ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ರಶ್ನೋತ್ತರ ಸಮಯದ ವೇಳೆ ಕಾಂಗ್ರೆಸ್ ನ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಲೋಕಸಭಾ ಮಾರ್ಷಲ್ ಗಳು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.