ನವದೆಹಲಿ: ಸುಧಾರಿತ ಸ್ಫೋಟಕ ಸಾಧನ(ಐಇಡಿ) ಹೊಂದಿದ್ದ ಮೂರು ಮಂದಿ ಉಗ್ರರನ್ನು ದೆಹಲಿ ಪೊಲೀಸರು ಸೋಮವಾರ ಅಸ್ಸಾಂನಲ್ಲಿ ಬಂಧಿಸಿದ್ದಾರೆ.
ಉಗ್ರರ ವಶದಲ್ಲಿದ್ದ ಪ್ರಚೋದನಕಾರಿ ಬರಹದ ಪುಸ್ತಕಗಳು ಮತ್ತು ಇತರ ಕೆಲವು ಸ್ಪೋಟಕಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂರು ಮಂದಿ ಉಗ್ರರನ್ನು ಬಂಧಿಸುವ ಮೂಲಕ ದೊಡ್ಡ ಮಟ್ಟದ ಉಗ್ರ ಚಟುವಟಿಕೆಯನ್ನು ತಡೆಯಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ ಪ್ರಮೋದ್ ಖುಶ್ವಾ ತಿಳಿಸಿದರು.
ರಾಜಧಾನಿ ಸಹಿತ ದೇಶದ ಕೆಲವೊಂದು ಪ್ರದೇಶಗಳಲ್ಲಿ ಉಗ್ರರು ದಾಳಿಗೆ ಮುಂದಾಗಿದ್ದರು ಎಂದು ತಿಳಿಸಿದರು.