ನವದೆಹಲಿ: ಮಹಾರಾಷ್ಟ್ರ ಮುಖ್ಮಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಾಳೆ ಸಂಜೆ 5ರ ಒಳಗೆ ವಿಶ್ವಾಸ ಮತ ಸಾಬೀತು ಪಡಿಸಬೇಕು ಎಂದು ಇಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.
ಸಂಜೆ ಸಂಜೆ 5ರ ಒಳಗೆ ವಿಶ್ವಾಸಮತ ಯಾಚಿಸಿ, ಕಲಾಪ ಮುಕ್ತಾಯ ಮಾಡಬೇಕು. ಗುಪ್ತ ಮತದಾನಕ್ಕೆ ಅವಕಾಶವಿಲ್ಲ, ಕಲಾಪದ ಸಂಪೂರ್ಣ ಪ್ರಕ್ರಿಯೆ ವಿಡಿಯೋ ಚಿತ್ರೀಕರಣವಾಗಿ ನೇರ ಪ್ರಸಾರವಾಗಬೇಕು.
ಹಂಗಾಮಿ ಸ್ಪೀಕರ್ ಪ್ರತಿಜ್ಞಾ ವಿಧಿ ಬೋಧನೆ ಮತ್ತು ವಿಶ್ವಾಸ ಮತ ಸಾಬೀತು ಪ್ರಕ್ರಿಯೆಯನ್ನು ನಡೆಸಿಕೊಡಬೇಕೆಂದು ಸುಪ್ರೀಂ ನ ತ್ರಿಸದಸ್ಯ ಪೀಠ ತೀರ್ಪು ನೀಡಿದೆ.