ಮುಂಬಯಿ: ಶಿವಸೇನೆ-ಕಾಂಗ್ರೆಸ್-ಎನ್ ಸಿಪಿಯ ಮಹಾ ಅಘಾಡಿಯು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲಲು ಯಶಸ್ವಿಯಾಗಿದೆ.
ಮೈತ್ರಿ ಸರ್ಕಾರ ಪರವಾಗಿ 169 ಮತಗಳು ಬಿದ್ದಿದೆ. ವಿಶ್ವಾಸಮತ ಯಾಚನೆಗೆ ಮೊದಲು ಹಂಗಾಮಿ ಸ್ಪೀಕರ್ ಆಗಿ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ಇದನ್ನು ಬಿಜೆಪಿ ವಿರೋಧಿಸಿದ್ದು, ಸ್ಪೀಕರ್ ಆಯ್ಕೆ ನಡೆಯದೆ ವಿಶ್ವಾಸಮತ ಯಾಚನೆ ಮಾಡಿರುವುದು ಮಹಾರಾಷ್ಟ್ರದ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲು ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಶ್ವಾಸಮತ ಯಾಚನೆ ಮಾಡುವ ನಿರ್ಣಯ ಮಂಡಿಸಿದ ಬಳಿಕ ಮತ ಎಣಿಕೆ ಕಾರ್ಯವು ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.
ಹಂಗಾಮಿ ಸ್ಪೀಕರ್ ನ್ನು ಬದಲಿಸಿರುವ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಬಿಜೆಪಿ ಹೇಳಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್ ಗೂ ತೆರಳುವುದಾಗಿ ಹೇಳಿದೆ.
ವಿಧಾನಸಭೆ ಕಲಾಪಕ್ಕೆ ಮೊದಲು ರಾಷ್ಟ್ರಗೀತೆ ಹಾಡದೆ ಇರುವುದು, ವಿಶ್ವಾಸಮತ ಯಾಚನೆ ಬಗ್ಗೆ ನಿನ್ನೆ ತಡರಾತ್ರಿ 1 ಗಂಟೆಗೆ ಮಾಹಿತಿ ನೀಡಿರುವುದನ್ನು ಬಿಜೆಪಿ ಸಂವಿಧಾನ ಬಾಹಿರ ಎಂದು ಹೇಳಿದೆ.