ನವದೆಹಲಿ: ಹೈದರಾಬಾದ್ ನಲ್ಲಿ ಪಶುವೈದ್ಯೆಯ ಅತ್ಯಾಚಾರಗೈದು ಸುಟ್ಟು ಹಾಕಿ ಕೊಲೆ ಮಾಡಿದ ಪ್ರಕರಣದ ಬಗ್ಗೆ ಇಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆ ನಡೆಯಿತು.
ಸಮಾಜವಾದಿ ಪಕ್ಷದ ನಾಯಕಿ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಅತ್ಯಾಚಾರಿಗಳನ್ನು ಸಾರ್ವಜನಿಕರ ಮಧ್ಯೆ ತರಬೇಕು ಮತ್ತು ಅವರಿಗೆ ಸಾರ್ವಜನಿಕರಿಂದ ಗುಂಪು ಹಲ್ಲೆ ನಡೆಸಬೇಕು ಎಂದರು.
ಇದು ಸಮಯವೆಂದು ನನಗೆ ಅನಿಸುತ್ತಿದೆ, ನಿರ್ಭಯಾ ಅಥವಾ ಕಥುವಾ ಅಥವಾ ಹೈದರಾಬಾದ್ ನಲ್ಲಿ ಏನು ನಡೆದಿದೆಯಾ? ಜನರು ಈಗ ಸರ್ಕಾರದಿಂದ ಉತ್ತರ ಕೇಳುತ್ತಿದ್ದಾರೆ. ಈ ಘಟನೆಗಳಲ್ಲಿ ಸಿಲುಕಿದ ಜನರಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಕ್ಕಿದೆ ಎಂದು ಜನರು ಪ್ರಶ್ನಿಸುವಂತಾಗಿದೆ. ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಮಾನ ಹರಾಜು ಮಾಡಬೇಕು ಮತ್ತು ಅವರ ಮೇಲೆ ಸಾರ್ವಜನಿಕರೇ ಹಲ್ಲೆ ನಡೆಸಬೇಕು ಎಂದು ಜಯಾ ಬಚ್ಚನ್ ಆಕ್ರೋಶಭರಿತರಾಗಿ ನುಡಿದರು.
ಕಳೆದ ಬುಧವಾರ ರಾತ್ರಿ 26ರ ಹರೆಯದ ಪಶುವೈದ್ಯೆಯನ್ನು ಹೈದರಾಬಾದ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಹತ್ಯೆ ಮಾಡಿ ಸುಟ್ಟು ಹಾಕಲಾಗಿತ್ತು.