News Kannada
Friday, December 09 2022

ದೇಶ-ವಿದೇಶ

ಸಿಎಎಯಿಂದ ಒಂದಿಂಚು ಹಿಂದೆ ಸರಿಯಲ್ಲ: ಅಮಿತ್ ಶಾ

Photo Credit :

ಸಿಎಎಯಿಂದ ಒಂದಿಂಚು ಹಿಂದೆ ಸರಿಯಲ್ಲ: ಅಮಿತ್ ಶಾ

ಜೋಧಪುರ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದ ಒಂದಿಂಚು ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಹಮ್ಮಿಕೊಂಡಿರುವಂತಹ ರಾಷ್ಟ್ರಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಎಲ್ಲಾ ವಿರೋಧ ಪಕ್ಷಗಳು ಜತೆಯಾಗಿ ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇಂದ್ರ ಸರ್ಕಾರವು ಒಂದಿಂಚು ಹಿಂದೆ ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿಎಎ ವಿಚಾರದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಮತ್ತು ಕಾಂಗ್ರೆಸ್ ವೋಟಿಗಾಗಿ ವೀರ ಸಾವರ್ಕರ್ ವಿರುದ್ಧವೇ ಮಾತನಾಡುತ್ತಿದೆ. ಕಾಂಗ್ರೆಸ್ ವೀರ ಸ್ವತಂತ್ರ ಸೇನಾನಿ ವೀರ ಸಾವರ್ಕರ್ ವಿರುದ್ಧವೇ ಮಾತನಾಡುತ್ತಿದೆ. ಕಾಂಗ್ರೆಸ್ ಗೆ ಇದರಿಂದ ನಾಚಿಗೆಯಾಗಬೇಕು ಎಂದು ಅವರು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಅವರನ್ನು ಟೀಕಿಸಿದ ಶಾ, ಗೆಹ್ಲೋಟ್ ಅವರು ಸಿಎಎ ವಿರೋಧ ಮಾಡುವ ಬದಲು ಕೋಟಾದಲ್ಲಿ ನಡೆಯುತ್ತಿರುವ ಮಕ್ಕಳ ಸಾವಿನ ಬಗ್ಗೆ ಗಮನಹರಿಸಲಿ ಎಂದರು.

See also  ಪ್ರವಾಹದ ವರದಿ ಮಾಡಲು ತೆರಳಿದ್ದ ವರದಿಗಾರ ನೀರುಪಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು