News Kannada
Thursday, September 29 2022

ದೇಶ-ವಿದೇಶ

ನಾಲ್ಕು ಮುಗ್ಧ ಮಕ್ಕಳನ್ನು ನಿರ್ದಯವಾಗಿ ಕೊಚ್ಚಿ ಕೊಂದ ಪಾಪಿ - 1 min read

Photo Credit :

ನಾಲ್ಕು ಮುಗ್ಧ ಮಕ್ಕಳನ್ನು ನಿರ್ದಯವಾಗಿ ಕೊಚ್ಚಿ ಕೊಂದ ಪಾಪಿ

ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ನಾಲ್ಕು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆಯ ಪ್ರಕರಣ ಉತ್ತರ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಮೂದಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲಗಾಂವ್ ಜಿಲ್ಲೆಯ ರಾವೆರ್ ತಾಲೂಕಿನ ಬೊರ್ಖೆಡಾ ಶಿವರ್ ಹಳ್ಳಿಯಲ್ಲಿ ಇಂದು ಮುಂಜಾನೆ ಜಮೀನಿನಲ್ಲಿರುವ ಮನೆಯೊಂದರಲ್ಲಿ ರಕ್ತದ ಒಡಲಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಮಕ್ಕಳ ಪೋಷಕರು ತಮ್ಮ ಹಿರಿಯ ಮಗನೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅವರು ಹಿಂತಿರುಗಿದ ಸಮಯದಲ್ಲಿ ತಮ್ಮ ಮಕ್ಕಳ ಮೇಲೆಸಗಿದ ಭಯಾನಕ ಕೊಲೆಯ ಕೃತ್ಯ ತಿಳಿದುಬಂದಿದೆ. ತಕ್ಷಣವೇ ಪೋಷಕರು ಪೊಲೀಸರಿಗೆ ಹಾಗೂ ಹಳ್ಳಿಯ ಜನರಿಗೆ ಮಾಹಿತಿ ರವಾನಿಸಿದ್ದಾರೆ.

ಮಕ್ಕಳ ಕುತ್ತಿಗೆಯಲ್ಲಿ ಆಳವಾದ ಗಾಯಗಳಿದ್ದು , ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿರಬಹುದು ಎಂದು ಉಳಿಸಲಾಗಿದೆ. ಮತ್ತು ಈ ಕೊಲೆ ಪ್ರಕರಣವನ್ನು ಅಪರಿಚಿತ ವ್ಯಕ್ತಿಯ ದಾಖಲಿಸಲಾಗಿದ್ದು , ತನಿಖೆ ಆರಂಭಿಸಲಾಗಿದೆ  ಎಂದು ಪ್ರಕರಣಕ್ಕೆ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ .

ಹತ್ತಿಗೀಡದ ಮಕ್ಕಳು 13 ವರ್ಷದ ಸಂಗೀತ, 11 ಹರೆಯದ ರಾಹುಲ್‌, 8 ವರ್ಷದ ಅನಿಲ್ ಹಾಗೂ 6ರ ನಾನಿ ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

See also  ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ರಾಜೀವ್ ಸಕ್ಸೆನಾ, ದೀಪಕ್ ತಲ್ವಾರ್ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು