ನವದೆಹಲಿ: ದೇಶದಲ್ಲಿ 36,604 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 94,99,414 ತಲುಪಿದೆ. 1,38,122 ಮಂದಿ ಮೃತಪಟ್ಟಿದ್ದು, 89,32,647 ಮಂದಿ ಗುಣಮುಖರಾಗಿರುವರು ಎಂದು ಸಚಿವಾಲಯವು ತಿಳಿಸಿದೆ.
ಒಟ್ಟು ದೇಶದಲ್ಲಿ ನಾಲ್ಕು ಲಕ್ಷ 28 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.