ಮುಂಬೈ: ರೈತರು ರೈತರೇ, ಅದು ಹರಿಯಾಣ ಮತ್ತು ಪಂಜಾಬ್ ಮಾತ್ರ ಅಲ್ಲ. ಒಂದು ದೇಶವಾಗಿ ನಾವು ಅವರಿಗೆ ಬೆಂಬಲ ನೀಡಬೇಕು. ಇದು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ನೀಡಲಾಗುತ್ತಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾರತ್ ಬಂದ್ ಗೆ ಕರೆ ನೀಡಿದರು.
‘ಇಡೀ ದೇಶ ಲಾಕ್ಡೌನ್ನಲ್ಲಿರುವಾಗಲೂ ರೈತರು ತಮ್ಮ ಕೆಲಸವನ್ನು ನಿಲ್ಲಿಸಿರಲಿಲ್ಲ. ಆದರೆ ಈಗ ಈ ಕಾಯ್ದೆಯ ವಿರುದ್ಧ ಹೋರಾಡುವುದಕ್ಕಾಗಿ ತಮ್ಮ ಕೆಲಸಗಳನ್ನು ಬಿಟ್ಟು ಪ್ರತಿಭಟನೆಗೆ ಇಳಿದಿದ್ದಾರೆ. ಕಳೆದ 11 ದಿನಗಳಿಂದ ಚಳಿಯನ್ನೂ ಲೆಕ್ಕಿಸದೆ ದೆಹಲಿಯ ಗಡಿಗಳಲ್ಲಿ ಕುಳಿತಿದ್ದಾರೆ. ಇಂಥ ಸಮಯದಲ್ಲಿ ಅವರ ಧ್ವನಿಗಳನ್ನು ಗಟ್ಟಿಗೊಳಿಸಲು ನಮ್ಮೆಲ್ಲರ ಅಗತ್ಯ ಅವರಿಗಿದೆ ಎಂದು ಅವರು ಹೇಳಿದ್ದಾರು.