ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೊಸ ಸಂಸತ್ತಿನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಹೊಸ ಕಟ್ಟಡವು ಸುಮಾರು 64,500 ಚದರ ವಿಸ್ತೀರ್ಣವಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಹೊಸ ಸಂಸತ್ತಿನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ನಡೆಸಲು ಮೋದಿಯವರನ್ನು ಆಹ್ವಾನಿಸಿದ್ದರು.
ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಶಿಲಾನ್ಯಾಸವನ್ನ ನೆರವೇರಿಸಿ, ಮಧ್ಯಾಹ್ನ 2.15 ಕ್ಕೆ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಾವು ಹಳೆಯ ಕಟ್ಟಡದಲ್ಲಿ ಸ್ವತಂತ್ರ ಭಾರತದ ಪ್ರಯಾಣವನ್ನು ಪ್ರಾರಂಭಿಸಿದ್ದೇವು, ನಾವು 75 ವರ್ಷಗಳನ್ನು ಪೂರ್ಣಗೊಳಿಸಿದಾಗ ಸಂಸತ್ತಿನ ಉಭಯ ಸದನಗಳ ಅಧಿವೇಶನವು ಹೊಸ ಸಂಸತ್ ಕಟ್ಟಡದಲ್ಲಿ ನಡೆಯಲಿದೆ. ಇದು ಕೇವಲ ಇಟ್ಟಿಗೆ ಮತ್ತು ಕಲ್ಲುಗಳ ಕಟ್ಟಡವಾಗುವುದಿಲ್ಲ, ಬದಲಿಗೆ 130 ಕೋಟಿ ಜನರ ಕನಸುಗಳ ಈಡೇರಿಕೆಯಾಗಲಿದೆ ”ಎಂದು ಬಿರ್ಲಾ ಹೇಳಿದ್ದಾರೆ.
ಸೋಮವಾರದಂದು ಕೇಂದ್ರ ವಿಸ್ತ ಯೋಜನೆಗೆ ಸಂಭಂದಿಸಿದಂತೆ ಸುಪ್ರೀಂ ಕೋರ್ಟ್, “ನೀವು ಅಡಿಪಾಯವನ್ನು ಹಾಕಬಹುದು, ನೀವು ಕಾಗದಪತ್ರಗಳನ್ನು ಮುಂದುವರಿಸಬಹುದು ಆದರೆ ಯಾವುದೇ ನಿರ್ಮಾಣ ಅಥವಾ ಯಾವುದೇ ಮರಗಳನ್ನು ಕತ್ತರಿಸುವಂತಿಲ್ಲ” ಎಂದು ಹೇಳಿದೆ.
ಈ ಹೊಸ ಉದ್ದೇಶಿತ ಸಂಸತ್ತಿನ ಕಟ್ಟಡವು ಲೋಕಸಭಾ ಕೊಠಡಿಯಲ್ಲಿ 888 ಸದಸ್ಯರನ್ನು ಹೊಂದಿದ್ದು, ಜಂಟಿ ಅಧಿವೇಶನಗಳಲ್ಲಿ ಸಾಮರ್ಥ್ಯವನ್ನು 1224 ಸದಸ್ಯರಿಗೆ ಹೆಚ್ಚಿಸಬಹುದಾಗಿದೆ.
ಈ ಯೋಜನೆಗೆ ಸುಮಾರು 971 ಕೋಟಿ ರೂ. ಕರ್ಚಾಗಲಿದ್ದು ದೇಶವು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಾಗ ಅಂದರೆ 2022 ರ ಆಗಸ್ಟ್ನಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ 3 ಕಿ.ಮೀ ಉದ್ದದ ರಸ್ತೆಯನ್ನು ನವೀಕರಿಸುವುದು ಇದರಲ್ಲಿ ಸೇರಿದೆ.