ಸಿಬಿಎಸ್ಇ 2021, ಜೆಇಇ 2021, ನೀಟ್ 2021 ಪರೀಕ್ಷೆಗಳ ದಿನಾಂಕಗಳ ಬಗ್ಗೆ ಹೆಚ್ಚುತ್ತಿರುವ ಹಾಪೋಹಗಳ ಮಧ್ಯೆ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಇಂದು ವಿದ್ಯಾರ್ಥಿಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವೆಬ್ನಾರ್ ಮೂಲಕ ಸಂವಹನ ನಡೆಸಿದರು.
ಸಂವಾದದ ಸಮಯದಲ್ಲಿ 2021 ನೇ ಸಾಲಿನ ಸಿಬಿಎಸ್ಇ 10, 12 ಬೋರ್ಡ್ ಪರೀಕ್ಷೆಗಳು ನಡೆಯಲಿವೆ ಎಂದು ಸುಳಿವು ನೀಡಿದರು. ಹಾಗೂ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗುವಂತೆ ಸೂಚಿಸಿದರು.
ಈ ಸಮಯದಲ್ಲಿ 10 ನೇ ತರಗತಿ, 12 ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸುವಾಗ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ಧರಾಗಲು ಸಾಕಷ್ಟು ಸಮಯವನ್ನು ನೀಡಲಿದೆ ಎಂದು ಸಚಿವರು ಹೇಳಿದರು. ಕರೋನ ವೈರಸ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
2021 ರಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸಹ ನಡೆಸಲಾಗುವುದು, ನೀಟ್ 2021 ಪರೀಕ್ಷೆಯನ್ನು ರದ್ದುಗೊಳಿಸುವ ಯಾವುದೇ ಯೋಜನೆಗಳಿಲ್ಲ ಏಕೆಂದರೆ ಇದು ವಿದ್ಯಾರ್ಥಿಗಳಿಗೆ ಮತ್ತು ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಲಿದೆ.” ರಮೇಶ್ ಪೋಖ್ರಿಯಾಲ್ ಹೇಳಿದರು.
ನೀಟ್ ಪರೀಕ್ಷೆಯನ್ನು ಯಾವಾಗಲೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಆಫ್ಲೈನ್ ಮೋಡ್ನಲ್ಲಿ ನಡೆಸುತ್ತಾರೆ ಆದರೆ COVID -19 ಕಾರಣ ಎನ್ಟಿಎ ಆನ್ಲೈನ್ ಮೋಡ್ನಲ್ಲಿ ನೀಟ್ 2021 ನಡೆಸಲು ಚರ್ಚಿಸುತ್ತಿದೆ. ವಿದ್ಯಾರ್ಥಿಗಳು ಆನ್ಲೈನ್ ನೀಟ್ ಪರೀಕ್ಷೆಯನ್ನು ಬರೆಯಲು ಬಯಸಿದರೆ ನಾವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ” ಎಂದು ಸಚಿವರು ಹೇಳಿದರು.